ಬೆಂಗಳೂರು, ಅ.05,2024: (www.justkannada.in news) ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೀವನಾಧಾರಿತ ಚಿತ್ರ “ಲೀಡರ್ ರಾಮಯ್ಯ” ಚಲನಚಿತ್ರ ರಾಜಕಾರಣಿಯ ಜೀವನದ ಆರಂಭಿಕ ವರ್ಷಗಳ ಚಿತ್ರೀಕರಣ ಸಂಪೂರ್ಣಗೊಳಿಸಿದೆ.
ಚಿತ್ರದ ನಿರ್ದೇಶಕ ಸತ್ಯ ರತ್ನಂ ಅವರು ಸಿದ್ದರಾಮಯ್ಯ ಅವರ ಬಾಲ್ಯವನ್ನು ಬಿಂಬಿಸುವ ದೃಶ್ಯಗಳನ್ನು ಪೂರ್ಣಗೊಳಿಸಿದ್ದು, ಮುಂದಿನ ಹಂತದ ನಿರ್ಮಾಣದ ವಿವರಗಳನ್ನು ಮಾಧ್ಯಮಗಳ ಜತೆ ಹಂಚಿಕೊಂಡರು.
”ಸಿದ್ದರಾಮಯ್ಯನವರ ಬಾಲ್ಯದ ಚಿತ್ರೀಕರಣವನ್ನು ಮುಗಿಸಿದ್ದೇವೆ. ನಮ್ಮ ಮುಂದಿನ ಹಂತವು ಅವರ ಕಾಲೇಜು ದಿನಗಳು ಮತ್ತು ವಕೀಲರಾಗಿ ಅವರ ಆರಂಭಿಕ ವೃತ್ತಿಜೀವನ ಚಿತ್ರೀಕರಿಸುವುದನ್ನು ಒಳಗೊಂಡಿರುತ್ತದೆ ”ಎಂದು ರತ್ನಂ ಮಾಧ್ಯಮಗಳಿಗೆ ತಿಳಿಸಿದರು.
ಈ ಚಿತ್ರದಲ್ಲಿ ವಿಜಯ್ ಸೇತುಪತಿ ಅವರು ರಾಜಕಾರಣಿ ಸಿದ್ದರಾಮಯ್ಯ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀಗ ಮೊದಲ ಹಂತದ ಫಸ್ಟ್ ಆಫ್ ಚಿತ್ರೀಕರಣ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಎರಡನೇ ಹಂತದ ಚಿತ್ರೀಕರಣದಲ್ಲಿ ಸಿದ್ದರಾಮಯ್ಯ ಅವರ ರಾಜಕೀಯ ಜೀವನದ ಮೇಲೆ ಹೆಚ್ಚು ಕೇಂದ್ರಿಕೃತವಾಗಿರಲಿದೆ.
ಪ್ರಸ್ತುತ ನಟ ಸೇತುಪತಿ ಅವರ ಲಭ್ಯತೆಗಾಗಿ ಚಿತ್ರತಂಡ ಕಾಯುತ್ತಿದ್ದು, ಸದ್ಯದಲ್ಲೇ ನಿಗಧಿತ ಸಮಯದಲ್ಲಿ ಚಿತ್ರೀಕರಣ ಪ್ರಾರಂಭಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಚಿತ್ರವು ತುಂಬಾ ಟ್ರ್ಯಾಕ್ನಲ್ಲಿದೆ, ಮತ್ತು ಮುಂದಿನ ಪ್ರಯಾಣದ ಬಗ್ಗೆ ನಾವು ಉತ್ಸುಕರಾಗಿದ್ದೇವೆ” ಎಂದ ಅವರು, “ಲೀಡರ್ ರಾಮಯ್ಯ” ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಯುವ ನಟ ಆಕಾಶ್ ಮುಖ್ಯಮಂತ್ರಿಯ ಬಾಲ್ಯದ ಆವೃತ್ತಿಯಲ್ಲಿ ನಟಿಸಿದ್ದಾರೆ ಎಂಬ ಮಾಹಿತಿ ನೀಡಿದರು.
key words: leader Ramaiya, Kannada Tamil movie Vijay sethupathi