ಕೋಲ್ಕತ್ತಾ: ಓರ್ವ ಮಹಿಳೆ ತಾನು ಲೀವ್ ಇನ್ ರಿಲೇಶನ್ ಶಿಪ್ನಲ್ಲಿದ್ದ ವ್ಯಕ್ತಿಯನ್ನೇ ಕೊಲೆ ಮಾಡಿರೋ ಘಟನೆ ಕೋಲ್ಕತ್ತಾದ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ.
ಸಾರ್ಥಕ್ ದಾಸ್ (32) ಕೊಲೆಯಾದ ವ್ಯಕ್ತಿ. ಸಂಹತಿ ಪೌಲ್ ಕೊಲೆ ಮಾಡಿದ ಆರೋಪಿ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಈ ಜೋಡಿ ಪ್ರೀತಿಸಲು ಆರಂಭಿಸಿ ಇಬ್ಬರು ಲಿವ್ ಇನ್ ರಿಲೇಶನ್ ಶಿಪ್ನಲ್ಲಿದ್ದರು. ಇನ್ನು ಸಂಹತಿ ಪೌಲ್ಗೆ ಈ ಹಿಂದೆ ಮದುವೆಯಾಗಿ ಒಂದು ಗಂಡು ಮಗು ಕೂಡ ಇತ್ತು. ಬಳಿಕ ಮೊದಲ ಪತಿಯಿಂದ ವಿಚ್ಛೇದನ ಪಡೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಆಗಿದ್ದ ಸಾರ್ಥಕ್ ದಾಸ್ ಜೊತೆ ಇದ್ದಳು. ಆದರೆ ಕಳೆದ ಬುಧವಾರ ದಾಸ್ ಮತ್ತು ಪಾಲ್ ನಡುವೆ ಗಲಾಟೆ ನಡೆದಿದ್ದು ಸಂಹತಿ ಪೌಲ್ ಕೋಪದಲ್ಲಿ ಸಾರ್ಥಕ್ ದಾಸ್ ಎದೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾಳೆ.
ಸದ್ಯ ಕೊಲೆ ಆರೋಪದ ಮೇಲೆ ಸಂಹತಿ ಪೌಲ್ ಅನ್ನು ಬಂಧಿಸಲಾಗಿದೆ.