ಲೆಬನಾನ್: ಇಸ್ರೇಲ್ ಉದ್ವಿಗ್ನತೆಯ ನಡುವೆ ನಿಗೂಢ ಪೇಜರ್ ಸ್ಫೋಟಗಳಲ್ಲಿ ಹಿಜ್ಬುಲ್ಲಾ ಹೋರಾಟಗಾರರು, ಇರಾನ್‌ನ ಲೆಬನಾನ್ ರಾಯಭಾರಿ ಸೇರಿದಂತೆ ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಲೆಬನಾನ್‌ನಾದ್ಯಂತ ಏಕಕಾಲದಲ್ಲಿ ಪೇಜರ್‌ಗಳ ಸ್ಫೋಟದ ದಾಳಿಯಲ್ಲಿ 8 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 2,750 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ 200 ಮಂದಿಗೆ ಗಂಭೀರ ಗಾಯಗಳಾಗಿವೆ.
ಗಾಜಾ ಯುದ್ಧದ ಜೊತೆಗೆ ಕಳೆದ ಅಕ್ಟೋಬರ್‌ನಿಂದ ಹಿಜ್ಬುಲ್ಲಾದೊಂದಿಗೆ ಸಂಘರ್ಷದಲ್ಲಿ ತೊಡಗಿರುವ ಇಸ್ರೇಲಿ ಮಿಲಿಟರಿಯಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆಯಿಲ್ಲ. ಇರಾನ್ ಬೆಂಬಲಿತ ಲೆಬನಾನಿನ ಉಗ್ರಗಾಮಿ ಗುಂಪು ಹಿಜ್ಬುಲ್ಲಾ ಸದಸ್ಯರು ಸೇರಿದಂತೆ 2000ಕ್ಕೂ ಹೆಚ್ಚು ಜನರು ಇಂದು ಅವರ ಸಂವಹನ ಪೇಜರ್‌ಗಳು ನಿಗೂಢವಾಗಿ ಸ್ಫೋಟಗೊಂಡಾಗ ಗಾಯಗೊಂಡಿದ್ದಾರೆ.
Reportedly, Hezbollah’s encrypted pager devices began simultaneously, exploding across Lebanon, including in Damascus.
Initial reports from Lebanon estimate around 1,000+ casualties.
Israeli hackers doing their job?🤔 pic.twitter.com/AgrBHs7IYF
— Keh Ke Peheno (@coolfunnytshirt) September 17, 2024