ಹಾಸನ: ಲೋಕಸಭಾ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಹೇಳಲಾದ ಹಸಿ-ಬಿಸಿ ದೃಶ್ಯಗಳ ಪೆನ್ ಡ್ರೈವ್ ವಿಡಿಯೋಗಳು ಈಗ ಜಿಲ್ಲೆಯ ಲಕ್ಷಾಂತರ ಜನರ ಮೊಬೈಲ್ಗಳಲ್ಲಿ ಹರಿದಾಡುತ್ತಿದ್ದು. ಜಿಲ್ಲೆಯಲ್ಲಿ ಯುವ ರಾಜಕಾರಣಿಯ ಹಸಿ-ಬಿಸಿ ದೃಶ್ಯಾವಳಿಗಳ ಬಗ್ಗೆ ಪಿಸು-ಪಿಸು ಚರ್ಚೆಗೆ ಗ್ರಾಸವಾಗಿದೆ.
ರಸ್ತೆ- ರಸ್ತೆಗಳಲ್ಲಿ , ಗಲ್ಲಿ- ಗಲ್ಲಿಗಳಲ್ಲಿ, ಟೀ ಕ್ಯಾಂಟೀನ್ಗಳು, ಹೊಟೆಲ್ಗಳು, ಪಾರ್ಕ್, ವಾಕಿಂಗ್ ಸ್ಥಳಗಳು, ಕಟ್ಟೆಗಳು, ಹೀಗೆ ಎಲ್ಲೆಲ್ಲಿಯೂ ಈ ಹಸಿಬಿಸಿ ದೃಶ್ಯಾವಳಿಗಳದ್ದೆ ಚರ್ಚೆ ನಡೆಯುತ್ತಿರುವುದು ಸಾಮಾನ್ಯವಾಗಿದೆ. ಇನ್ನು ಮೊಬೈಲ್ಗಳಲ್ಲಿ ಸ್ಥಾನ ಪಲ್ಲಟವಾಗಿ ಕಾಫಿ ಪೇಸ್ಟ್ ಅಗುತ್ತಿರುವುದು ನಿರಂತರವಾಗಿದೆ ಎನ್ನಲಾಗಿದೆ. ಒಬ್ಬರು ಯುವ ರಾಜಕಾರಣಿ ಎಷ್ಟೆಲ್ಲ ಅಸಹ್ಯಕರವಾಗಿ ನಡೆದುಕೊಳ್ಳ ಬಾರದೋ ಅಷ್ಟು ಅಸಹ್ಯಕರವಾಗಿ ಹಸಿ-ಬಿಸಿ ದೃಶ್ಯಾವಳಿಗಳನ್ನು ಸೆರೆ ಹಿಡಿಯುವ ಮೂಲಕ ಸಾರ್ವಜನಿಕರ ಶಾಪಕ್ಕೆ ಗುರಿಯಾಗಿದ್ದಾರೆ.
ಮಗದೊಂದು ಕಡೆ ಇಂದೂ ಸಹ ಹಾಸನ ಜಿಲ್ಲೆಯ ಹೊಳೆನರಸೀ ಪುರ ಭಾಗದಲ್ಲಿ ಮೂರು ವಿಡಿಯೋ ಇರುವ ಪೆನ್ ಡ್ರೈವ್ಗಳು ಜನರ ಕೈಗೆ ದೊರೆತಿದ್ದು. ವಿಡಿಯೋದೊಳಗಿರುವ ದೃಶ್ಯಗಳು ಒಂದೊಂದಾಗಿ ಹೊರ ಬರುತ್ತಿವೆ. ಇಂದು ಸರಿ ಸುಮಾರು 4 ರಿಂದ5 ಸಾವಿರದಷ್ಟು ಪೆನ್ ಡ್ರೈವ್ಗಳು ಕ್ಷೇತ್ರದಲ್ಲಿ ಹಂಚಿಕೆಯಾಗಿವೆ ಎಂಬ ಮಾತುಗಳು ಕೇಳಿ ಬಂದಿವೆ.
ಈ ಕುರಿತು ದೂರು
ನನ್ನ ತೇಜೋವಧೆ ಮಾಡಲು ಎ.ಐ ತಂತ್ರಜ್ಞಾನ ಬಳಸಿ ಅಶ್ಲೀಲ ವಿಡಿಯೋ ಸೃಷ್ಠಿಸಲಾಗಿದೆ ಎಂದು ರಾಜಕಾರಣಿಯೊಬ್ಬರು ಜಿಲ್ಲಾ ಚುನಾವಣಾ ಆಯೋಗಕ್ಕೆ ಹಾಗೂ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆನ್ನಲಾಗಿದ್ದು, ಅದರ ಸತ್ಯಾ ಸತ್ಯತೆ ಇನ್ನಷ್ಟೆ ಹೊರ ಬರಬೇಕಿದೆ.