ರಾಜಸ್ಥಾನ: ಮುಖ್ಯಮಂತ್ರಿಗಳ ವಾಹನಗಳು ಬಂತೆಂದರೆ ತುರ್ತು ಅಗತ್ಯವಿದ್ದವರು ಕೂಡ ಸಿಗ್ನಲ್ನಲ್ಲಿ ನಿಲ್ಲಬೇಕಿತ್ತು, ಹೀಗಾಗಿ ಜನರು ತುಂಬಾ ತೊಂದರೆ ಅನುಭವಿಸುತ್ತಿದ್ದರು. ಇನ್ನುಮುಂದೆ ಈ ಕಿರಿಕಿರಿ ಇರುವುದಿಲ್ಲ. ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಒಂದು ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇವರು ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡಿದ್ದಾರೆ.
ಭಜನ್ಲಾಲ್ ಇನ್ನುಮುಂದೆ ರಸ್ತೆಯಲ್ಲಿ ಸಾಮಾನ್ಯ ಜನರಂತೆ ಸಂಚರಿಸಲಿದ್ದಾರೆ. ಸಿಗ್ನಲ್ಗಳಲ್ಲಿ ಅವರ ವಾಹನ ಹಾಗೂ ಬೆಂಗಾವಲು ವಾಹನಗಳು ಎಲ್ಲಾ ವಾಹನಗಳು ನಿಲ್ಲುವಂತೆಯೇ ನಿಲ್ಲಲಿದೆ. ಅವರಿಗಾಗಿ ಪ್ರತ್ಯೇಕ ಸಾಲು ಮಾಡಿ ಓಡಾಡುವ ಸಂಸ್ಕೃತಿಯಿಂದ ಹೊರಬಂದಿದ್ದಾರೆ. ಈ ನಿರ್ಧಾರವು ರಾಜಸ್ಥಾನ ಜನತೆಗೆ ಖುಷಿ ತಂದಿದೆ.
ಭಜನ್ಲಾಲ್ ಶರ್ಮಾ ಅವರು ಸಹೃದಯತೆ ಹಾಗೂ ಸೂಕ್ಷ್ಮತೆಯಿಂದ ಈ ವಿಚಾರವನ್ನು ಗಮನಿಸಿ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಒದಗಿಸಲಾದ ಭದ್ರತೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ವಿಐಪಿ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ ಸಾಮಾನ್ಯ ಜನರು ಮತ್ತು ರೋಗಿಗಳು ಎದುರಿಸುತ್ತಿರುವ ಟ್ರಾಫಿಕ್ ಸಮಸ್ಯೆಗಳನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಡಿಜಿಪಿ ಸಾಹೂ ಹೇಳಿದ್ದಾರೆ.