ವಿಜಯ್ ಮನೆಯಲ್ಲಿ ದೀಪಾವಳಿ ಆಚರಿಸಿದ ರಶ್ಮಿಕಾ ಮಂದಣ್ಣ

ಬೆಂಗಳೂರು: ಇಡೀ ದೇಶವೇ ದೀಪಾವಳಿ ಸಂಭ್ರಮದಲ್ಲಿದೆ. ಎಲ್ಲ ಸಿನಿ ತಾರೆಯರು ಅದುರಿಯಾಗಿ ದೀಪಾವಳಿ ಆಚರಿಸುತ್ತಿದ್ದರೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇದರ ಹೊರತಾಗಿಲ್ಲ.

ಇಬ್ಬರು ಒಬ್ಬರನ್ನೊಬ್ಬರೂ ಪ್ರೀತಿಸುತ್ತಿದ್ದರೂ. ಆದರೂ ನಾವಿಬ್ಬರೂ ಫ್ರೆಂಡ್ಸ್ ಎಂದು ಹೇಳಿಕೊಂಡಿದ್ದಾರೆ. ಇದೀಗ ವಿಜಯ್ ಮನೆಯಲ್ಲಿ ರಶ್ಮಿಕಾ, ದೀಪಾವಳಿ ಹಬ್ಬ ಆಚರಣೆ ಮಾಡಿರೋದಕ್ಕೆ ಸಾಕ್ಷಿಯೊಂದು ಅಭಿಮಾನಿಗಳಿಗೆ ಸಿಕ್ಕಿದೆ.

ಸೀರೆಯುಟ್ಟಿರುವ ಫೋಟೋವೊಂದನ್ನ ನಟಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ‘ಹ್ಯಾಪಿ ದೀಪಾವಳಿ ಮೈ ಲವ್ಸ್’ ಎಂದು ಅಡಿಬರಹ ನೀಡಿದ್ದಾರೆ. ವಿಜಯ್ ಮನೆಯ ಹಬ್ಬದ ಸಂಭ್ರಮದ ಫೋಟೋಗಳನ್ನೂ ಸಹ ಹಂಚಿಕೊಂಡಿದ್ದಾರೆ. ಅವರು ಕೂಡ ರಶ್ಮಿಕಾ ನೀಡಿದ ಕ್ಯಾಪ್ಷನ್ ಅನ್ನೇ ನೀಡಿದ್ದಾರೆ.

ಇನ್ನೂ ರಶ್ಮಿಕಾ ಕುಳಿತಿರುವ ಫೋಟೋದಲ್ಲಿ ಬ್ಯಾಕ್‌ಗ್ರೌಂಡ್ ಲುಕ್ ನೋಡಿ ಇದು ವಿಜಯ್ ಮನೆಯೆಂದೇ ಫ್ಯಾನ್ಸ್ ಕಾಮೆಂಟ್ ಮಾಡ್ತಿದ್ದಾರೆ. ಸದ್ಯ ವಿಜಯ್‌ ಮನೆಯಲ್ಲಿ ನಟಿ ಹಬ್ಬ ಸೆಲೆಬ್ರೇಟ್‌ ಮಾಡಿರೋದು ನಿಜ ಎನ್ನಲಾಗುತ್ತಿದೆ.

ಇತ್ತೀಚೆಗೆ ‘ಖುಷಿ’ ಸಿನಿಮಾದ ಪ್ರಚಾರದ ವೇಳೆ ಮದುವೆ ಬಗ್ಗೆ ಸದ್ಯದಲ್ಲೇ ಅಪ್‌ಡೇಟ್ ನೀಡುತ್ತೇನೆ ಎಂದು ವಿಜಯ್ ತಿಳಿಸಿದ್ದರು.

Font Awesome Icons

Leave a Reply

Your email address will not be published. Required fields are marked *