ವಿಟ್ಲದ ಪೆರುವಾಯಿಯ ಫಾತಿಮಾ ಮಾತೆಯ ದೇವಾಲಯದಲ್ಲಿ ಸ್ತ್ರಿಸಂಘಟನೆ

ಮಂಗಳೂರು: ಬಂಟ್ವಾಳ ತಾಲೂಕಿನ ವಿಟ್ಲದ ಪೆರುವಾಯಿಯ ಫಾತಿಮಾ ಮಾತೆಯ ದೇವಾಲಯದಲ್ಲಿ ಸ್ತ್ರಿಸಂಘಟನೆ, ಸ್ತ್ರೀ ಹಾಗೂ ಕುಟುಂಬ ಆಯೋಗದ ವತಿಯಿಂದ ವಿವಾಹಿತರ ದಿನವನ್ನು ಆಚರಿಸಿದರು.ಮೊದಲು ನಡೆದ ಬಲಿಪೂಜೆಯಲ್ಲಿ ಫ್ರಧಾನ ಗುರುಗಳಾದ ವ.ಅಲ್ವೀನ್ ಸೆರಾವೋ ವೈವಾಹಿಕ ಸಂಬಂಧದ ಅಗತ್ಯತೆ ಹಾಗೂ ಇತ್ತೀಚಿನ‌ ದಿನಗಳಲ್ಲಿ ವಿವಾಹ ಸಂಬಂಧಗಳು ಕಡಿಯುವ ಬಗ್ಗೆ ಕಳವಳ ವ್ಯಕ್ತಪಡಿಸಿ ಸಂಬಂಧಗಳನ್ನು ಉಳಿಸಲು ಸಲಹೆ ನೀಡಿದರು. ಇದೇ ವೇಳೆ ವಿವಾಹಿತ ಜೋಡಿಗಳಿಗಾಗಿ ವಿಶೇಷ ಪ್ರಾರ್ಥನೆ ಮಾಡಿದರು.

ನಂತರ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಶಿಕ್ಷಕ ರಿಚರ್ಡ್ ಅಲ್ವಾರೀಸ್ ವಿವಾಹ ಸಂಬಂಧಗಳು ಗಟ್ಟಿಯಾಗಲು ಯಾವೆಲ್ಲಾ ಅಂಶಗಳು ಅವಶ್ಯ ಎಂಬುವುದರ ಬಗ್ಗೆ ವಿವರಿಸಿದರು.ಕಾರ್ಯಕ್ರಮದಲ್ಲಿ ೫೦ ಜೋಡಿಗಳು ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲಾ ಜೋಡಿಗಳಿಗೆ ಸ್ತ್ರೀ ಸಂಘಟನೆ ವತಿಯಿಂದ ನೆನಪಿನ ಕಾಣಿಕೆ ನೀಡಲಾಯಿತು. ಕಾರ್ಯಕ್ರಮದಲ್ಲಿ ದೇವಾಲಯದ ಧರ್ಮಗುರು ವ. ಸೈಮನ್ ಡಿ’ಸೋಜ ಹಾಗೂ ಪಾಲನಾ ಮಂಡಳಿ ಉಪಾಧ್ಯಕ್ಷ ಡೆನಿಸ್ ಮೊಂತೇರೊ,ಕಾರ್ಯದರ್ಶಿ ವೈಲೆಟ್ ಕುವೆಲ್ಲೊ ಆಯೋಗ ಸಂಯೋಜಕರಾದ ಶ್ರೀ ರಾಲ್ಫ್ ಡಿಸೋಜ,
ಸ್ತ್ರೀ ಸಂಘಟನೆಯ ಉಪಾಧ್ಯಕ್ಷರಾದ ಶ್ರೀಮತಿ ಶೋಭ ಡಿಸೋಜ ಸೇರಿ ಹಲವರು ಉಪಸ್ಥಿತರಿದ್ದರು

Font Awesome Icons

Leave a Reply

Your email address will not be published. Required fields are marked *