ಮೈಸೂರು,ನವೆಂಬರ್,26,2024 (www.justkannada.in): ವಿದ್ಯಾರ್ಥಿಗಳು ಕ್ರೀಡೆಯೊಂದಿಗೆ ಕಲಿಕೆಯಲ್ಲೂ ಆಸಕ್ತಿ ವಹಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಮೈಸೂರು ಜಿಲ್ಲೆ ಉಪನಿರ್ದೇಶಕ ಜವರೇಗೌಡ ಸಲಹೆ ನೀಡಿದರು.
ಶಾಲಾ ಶಿಕ್ಷಣ ಇಲಾಖೆಯ ಮೈಸೂರು ಜಿಲ್ಲೆ ಉಪನಿರ್ದೇಶಕರ ಕಚೇರಿಯ ಸಹಭಾಗಿತ್ವದಲ್ಲಿ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಯ ಚಾಮುಂಡಿ ವಿಹಾರ್ ಸ್ಟೇಡಿಯಂನ ಒಳಾಂಗಣ ಕ್ರೀಡಾಂಗಣದಲ್ಲಿ ನೆರವೇರಿತು.
ಈ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಜವರೇಗೌಡ ಅವರು, ಕ್ರೀಡೆ ವಿದ್ಯಾರ್ಥಿಗಳ ಬೆಳವಣಿಗೆಯಲ್ಲಿ ಅತ್ಯಂತ ಮಹತ್ತರ ಪಾತ್ರವನ್ನು ವಹಿಸುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ದೈಹಿಕ ಚಟುವಟಿಕೆಗೆ ಹೆಚ್ಚಿನ ಆಸಕ್ತಿ ವಹಿಸಿ ದಿನನಿತ್ಯ ವ್ಯಾಯಾಮ ಇತರೆ ದೈಹಿಕ ಚಟುವಟಿಕೆಗಳ ಅಭ್ಯಾಸ ಮಾಡಿದ್ದಲ್ಲಿ ನಮ್ಮಗಳ ಆರೋಗ್ಯ ಉತ್ತಮ ಸ್ಥಿತಿಯಲ್ಲಿರುತ್ತದೆ . ಆದುದರಿಂದ ವಿದ್ಯಾರ್ಥಿಗಳು ಕ್ರೀಡೆಯೊಂದಿಗೆ ಕಲಿಕೆಯಲ್ಲೂ ಆಸಕ್ತಿಯನ್ನು ವಹಿಸಿ ಉತ್ತಮ ಕ್ರೀಡಾಪಟುಗಳಾಗಿ ಬೆಳೆಯುವಂತೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿಗಳಾದ ಸೋಮಶೇಖರ್, ಕರ್ನಾಟಕ ರಾಜ್ಯ ಕರಾಟೆ ಅಸೊಷಿಯೇಷನ್ ಉಪಾಧ್ಯಕ್ಷರಾದ ಹಂಸಿ ಎನ್ ಶಂಕರ್, ಮೈ ಸೂರು ಜಿಲ್ಲಾ ಮೈಸೂರು. ಜಿಲ್ಲೆಯ ಕರಾಟೆ ಅಸೊಷಿಯೇಷನ್ ಅಧ್ಯಕ್ಷರಾದ ಶಿವದಾಸ್, ಕಾರ್ಯದರ್ಶಿಗಳಾದ ದೀಪಕ್, ವಿವಿಧ ತಾಲ್ಲೂಕಿನ ದೈಹಿಕ ಪರಿವೀಕ್ಷಕರುಗಳು, ಕ್ರೀಡಾಧಿಕಾರಿಗಳು, ಕ್ರೀಡಾಪಟುಗಳು ಉಪಸ್ಥಿತರಿದ್ದರು.
Key words: Students, interest, studies, sports, Mysore, Javare Gowda