ವಿದ್ಯಾರ್ಥಿಗಳ ಮನೆಗಳಿಗೆ ಬೆಳ್ಳಂಬೆಳಗ್ಗೆ  ಭೇಟಿ ನೀಡಿದ‌ ಬಿಇಒ ̤ ̤ ! – Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್




kannada t-shirts

ಮೈಸೂರು, ಮಾ.೦೬, ೨೦೨೪  : ಎಸೆಸೆಲ್ಸಿ ವಿದ್ಯಾರ್ಥಿಗಳ ಮನೆಗಳಿಗೆ ಬೆಳ್ಳಂಬೆಳಗ್ಗೆ  ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ.   ಪರೀಕ್ಷೆ ಸಮೀಪಿಸುತ್ತಿರುವುದರಿಂದ ವಿದ್ಯಾರ್ಥಿಗಳು ಬೆಳಗಿನ ಜಾವ ಓದುತ್ತಿರುವ ಬಗ್ಗೆ ಹಾಗೂ ಅವರ ಸಿದ್ಧತೆಯ ಬಗ್ಗೆ ವಿದ್ಯಾರ್ಥಿ ಹಾಗೂ ಪೋಷಕರಿಗೆ ಜಾಗೃತಿ ಮೂಡಿಸಿದ ದಕ್ಷಿಣ ವಲಯ ಬಿಇಒ, ಸಿ.ಎನ್. ರಾಜು.

ವಿದ್ಯಾರ್ಥಿಗಳಿಗೆ ಬೆಳಗಿನಜಾವ ಯಾವ ವಿಷಯ ಬಗ್ಗೆ ಅಭ್ಯಾಸ ಮಾಡಬೇಕು ಎನ್ನುವುದನ್ನು ಪರಿಶೀಲಿಸಿ ಖಾತ್ರಿ ಪಡಿಸಿಕೊಳ್ಳಲಾಯಿತು. ಜತೆಗೆ ಪೋಷಕರಿಗೆ ಪರೀಕ್ಷೆ ಬಗ್ಗೆ ತಿಳಿ ಹೇಳಲಾಯಿತು.  ಮಕ್ಕಳಿಗೆ ಬೇರೆ ಇತರ ಕೆಲಸ ಕಾರ್ಯಗಳನ್ನು ನೀಡದೆ  ಓದುವ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ಪೋಷಕರಿಗೆ ಜಾಗೃತಿ ಮೂಡಿಸಲಾಯಿತು.

ಮೈಸೂರಿನ ಜನತಾ ನಗರ. ವಸಂತನಗರ. ತೊಣಚಿ ಕೊಪ್ಪಲ್ ನಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ  (ಕೆಪಿಎಸ್ ಶಾಲೆ ಕುವೆಂಪುನಗರ )ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಲಾಯಿತು.

Key words : mysore ̲ sslc  ̲ students ̲ beo ̲ visits

website developers in mysore






Previous articleಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ವಿಜ್ಞಾನ ನಗರ (Science City) ಕ್ಕೆ ಜಾಗ


Font Awesome Icons

Leave a Reply

Your email address will not be published. Required fields are marked *