ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಾಲೆಗೆ ಹೋಗಿ ಬರುತ್ತಿದ್ದ ವಿದ್ಯಾರ್ಥಿನಿ ಮೇಲೆ ಖಾಸಗಿ ಬಸ್ ಕ್ಲೀನರ್ ಅತ್ಯಾಚಾರ ಎಸಗಿದ ಘಟನೆ ಸಂಭವಿಸಿದೆ.
ಆರೋಪಿ ದೊಡ್ಡಬಳ್ಳಾಪುರದ ಆನಂದ್ (24) ಎಂಬಾತನ ಬಂಧನವಾಗಿದೆ. ವಾರದ ಹಿಂದೆ ಶಾಲೆಗೆ ಹೋಗಿದ್ದ ಬಾಲಕಿ ನಾಪತ್ತೆಯಾಗಿದ್ದಳು. ಈ ಬಗ್ಗೆ ಪೋಷಕರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಸಿದ್ದರು. ಮೊಬೈಲ್ ಕರೆ ಆಧಾರದ ಮೇಲೆ ಯಲಹಂಕ ಬಳಿ ಬಾಡಿಗೆ ಮನೆಯಲ್ಲಿರಿಸಿದ್ದ 14 ವರ್ಷದ ಬಾಲಕಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ.
ದಾಬಸ್ ಪೇಟೆ- ದೊಡ್ಡಬಳ್ಳಾಪುರ ಮಾರ್ಗವಾಗಿ ಬರುತ್ತಿದ್ದ ಬಸ್ನಲ್ಲಿ ಆರೋಪಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದನು.