ವಿಪಕ್ಷಗಳ “ದಂಡ”ಯಾತ್ರೆ : ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ FULL RELAX » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


 

Siddaramaiah, who has been in politics for over four decades, has served as deputy chief minister and chief minister. But the irony is that he did not have a house of his own in Mysore. The construction of the house in Kuvempunagar started two years ago.

ಮೈಸೂರು, ಆ.6,2024: (www.justkannada.in news): ವಿಪಕ್ಷಗಳಾದ ಜೆಡಿಎಸ್‌ ಹಾಗೂ ಬಿಜೆಪಿ ರಾಜ್ಯ ಕಾಂಗ್ರೆಸ್‌ ಸರಕಾರದ ವಿರುದ್ಧ ಬೆಂಗಳೂರಿಂದ ಮೈಸೂರಿಗೆ ಪಾದಯಾತ್ರೆ ಚಳವಳಿ ನಡೆಸುತ್ತಿದ್ದಾರೆ. ಮೈಸೂರು ತಲುಪುವಷ್ಟರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವರು ಎಂದು ಬಿಜೆಪಿ ಮುಖಂಡ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ಆದರೆ, ಇದ್ಯಾವುದು ಲೆಕ್ಕಕ್ಕೆ ಇಲ್ಲ ಎಂಬಂತೆ ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಫುಲ್‌  ರಿಲ್ಯಾಕ್ಸ್‌ ಮೂಡ್‌ ನಲ್ಲಿ ಮೈಸೂರಲ್ಲೇ ಇದ್ದಾರೆ. ಇಂದು ಸಂಜೆ, ಪ್ರೋಟೋಕಾಲ್‌ ತ್ಯಜಿಸಿ ಹುಣಸೂರಿನ ಮಾಜಿ ಶಾಸಕ ಎಚ್.ಪಿ.ಮಂಜುನಾಥ್‌ ಅವರ ಜತೆ ಕಾರಿನಲ್ಲಿ ಮೈಸೂರಿನ ಕುವೆಂಪುನಗರ ಬಳಿ ನೂತನವಾಗಿ ನಿರ್ಮಿಸುತ್ತಿರುವ ಮನೆ ನಿರ್ಮಾಣ ಕೆಲಸ ವೀಕ್ಷಿಸಿ, ಬಳಿಕ ಕಾರಲ್ಲೇ ಕುಳಿತು ಬಿಸಿಬಿಸಿ ಕಾಫಿ ಸವಿದರು.

ನಾಲ್ಕು ದಶಕಗಳಿಂದ ರಾಜಕಾರಣದಲ್ಲಿರುವ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದವರು. ಆದರೆ ವಿಪರ್ಯಾಸವೆಂದರೆ ಅವರಿಗೆ ಮೈಸೂರಿನಲ್ಲಿ ಒಂದು ಸ್ವಂತ ಸೂರಿರಲಿಲ್ಲ. ಎರಡು ವರ್ಷಗಳ ಹಿಂದೆ ಕುವೆಂಪುನಗರದಲ್ಲಿ ಮನೆ ನಿರ್ಮಾಣ ಕಾರ್ಯ ಆರಂಭಿಸಲಾಯಿತು.

ಮುಖ್ಯಮಂತ್ರಿಯಾದ ಬಳಿಕ ಸಿದ್ದರಾಮಯ್ಯ ಅವರು ಹಲವು ಬಾರಿ ಮೈಸೂರಿಗೆ ಭೇಟಿ ನೀಡಿದ್ದರು, ಈ ಕಡೆ ಅಷ್ಟೇನು ಹೆಚ್ಚಾಗಿ ಸುಳಿದಿರಲಿಲ್ಲ. ಟಿ.ಕೆ.ಲೇಔಟ್‌ ನಲ್ಲಿರುವ ನಿವಾಸದಲ್ಲೇ ವಾಸ್ತವ್ಯ ಹೂಡಿ , ಮುಖಂಡರ ಭೇಟಿ, ಸಾರ್ವಜನಿಕರ ಆಹವಾಲು ಸ್ವೀಕಾರ, ಮಾಧ್ಯಮ ಪ್ರತಿನಿಧಿಗಳಿಗೆ ರಿಯಾಕ್ಷನ್‌ ಅಥವಾ ಪತ್ರಿಕಾಗೋಷ್ಠಿ ..ಇವೆಲ್ಲವೂ ಈ ಮನೆಯಲ್ಲೇ ನಡೆಯುತ್ತಿತ್ತು.

ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯ ಮುಖ್ಯ ರಸ್ತೆಗೆ ಹೊಂದಿಕೊಂಡತೆ ಇರುವ ೮೦/ ೧೦೦ ಅಳತೆಯ ನಿವೇಶನದಲ್ಲಿ ಮನೆ ನಿರ್ಮಿಸಲಾಗುತ್ತಿದೆ. ವಾಹನ ನಿಲುಗಡೆಗೆ ಸೆಲ್ಲಾರ್‌ ಹೊಂದಿರುವ ಈ ಡ್ಯೂಪ್ಲೆಕ್ಸ್‌ ಮನೆಯ ನಿರ್ಮಾಣ ಕಳೆದೆರೆಡು ವರ್ಷಗಳಿಂದ ಮಂದಗತಿಯಲ್ಲೇ ಸಾಗುತ್ತಿದ್ದು, ಇದೀಗ ಕಟ್ಟಡಕ್ಕೆ ಅಂತಿಮ ಹಂತದ ರೂಪುರೇಷೆ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಪರೂಪಕ್ಕೆ ಎಂಬಂತೆ ಮುಖ್ಯಮಂತ್ರಿ  ಸಿದ್ದರಾಮಯ್ಯ ಮನೆ ನಿರ್ಮಾಣ ಕಾರ್ಯ ವೀಕ್ಷಣೆಗೆ ಆಗಮಿಸಿದ್ದರು.

ಅತಿಥಿ ಉಪನ್ಯಾಸಕರ ಮನವಿ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮೈಸೂರು ವಿವಿ ಅತಿಥಿ ಉಪನ್ಯಾಸಕರು ಮನವಿ ಪತ್ರ ಸಲ್ಲಿಸಿ, ಹುದ್ದೆ ಮುಂದುವರೆಸುವಂತೆ ಕುಲಪತಿಗಳಿಗೆ ಸೂಚಿಸುವಂತೆ ಮನವಿ ಮಾಡಿದರು. ಬೇಡಿಕೆ ಈಡೇರಿಕೆಗಾಗಿ ಅತಿಥಿ ಉಪನ್ಯಾಸಕರು ನಿನ್ನೆಯಿಂದ ಆಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಖುದ್ದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಮನವಿ ಆಲಿಸಿದ ಸಿಎಂ ಸಿದ್ದರಾಮಯ್ಯ, ಕುಲಪತಿ ಪ್ರೊ.ಲೋಕನಾಥ್‌ ಅವರ ಜತೆ ಮಾತನಾಡುವ ಭರವಸೆ ನೀಡಿದರು.

ನಾಳೆ ಪತ್ರಿಕಾಗೋಷ್ಠಿ :

ನಾಳೆ ಬೆಳಗ್ಗೆ ೧೦ ಗಂಟೆಗೆ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮಗೋಷ್ಠಿ ಆಯೋಜಿಸಲಾಗಿದೆ. ವಿಪಕ್ಷಗಳ ಪಾದಯಾತ್ರೆ, ರಾಜ್ಯಪಾಲರ ನೋಟಿಸ್‌ ನೀಡಿರುವ ಬೆಳವಣಿಗೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ನಾಳಿನ ಪ್ರೆಸ್‌ ಮೀಟ್‌ ಕುತೂಹಲ ಕೆರಳಿಸಿದೆ.

ಮುಡಾ ನಿವೇಶನ ಸಂಬಂದ ವಿಪಕ್ಷಗಳ ಆರೋಪಕ್ಕೆ ಮೈಸೂರಿನಲ್ಲೇ ಮಾಧ್ಯಮಗೋಷ್ಠಿ ಮೂಲಕ ಸಿಎಂ ಸಿದ್ದರಾಮಯ್ಯ ಪ್ರತ್ಯುತ್ತರ ನೀಡುವರೇ ಎಂಬುದು ಮಾಧ್ಯಮ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಆಸಕ್ತಿ ಮೂಡಿಸಿದೆ.

KEY WORDS: Opposition’s, ‘Danda’ Yatra, CM, Siddaramaiah, FULL RELAX, in Mysuru

SUMMARY:

Siddaramaiah, who has been in politics for over four decades, has served as deputy chief minister and chief minister. But the irony is that he did not have a house of his own in Mysore. The construction of the house in Kuvempunagar started two years ago.

 

Font Awesome Icons

Leave a Reply

Your email address will not be published. Required fields are marked *