ವಿರಾಟ್ ಕೊಹ್ಲಿ ಬಯೋಪಿಕ್ ನಲ್ಲಿ ರಾಮ್ ಚರಣ್ ನಟನೆ

ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ಸೆಂಚುರಿ ಸಿಡಿಸಿದ ಬ್ಯಾಟ್ಸ್‌ಮೆನ್‌ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಅವರ ಸಾಧನೆಯ ಕಥೆಯನ್ನ ಇದೀಗ ‘ಆರ್‌ಆರ್‌ಆರ್‌’ ಸೂಪರ್ ಸ್ಟಾರ್ ರಾಮ್ ಚರಣ್ ಹೇಳಲು ಬರುತ್ತಿದ್ದಾರೆ. ವಿರಾಟ್ ಪಾತ್ರದಲ್ಲಿ ಚರಣ್ ನಟಿಸಲಿದ್ದಾರೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಕ್ರೀಡೆ ಆಧರಿಸಿದ ಸಿನಿಮಾದಲ್ಲಿ ನಟಿಸಲು ಇಷ್ಟ ಎಂದು ರಾಮ್ ಚರಣ್ ಹೇಳಿದ್ದರು. ವಿರಾಟ್ ಕೊಹ್ಲಿ ಬಯೋಪಿಕ್ ಆಫರ್ ಬಂದರೆ ನಟಿಸಲು ಸಿದ್ಧ ಎಂದಿದ್ದರು.‌

ಅದರಂತೆ ಬಾಲಿವುಡ್‍ನ ಖ್ಯಾತ ಸಂಸ್ಥೆ ವಿರಾಟ್ ಕೊಹ್ಲಿ ಬಯೋಪಿಕ್ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ರಾಮ್ ಚರಣ್ ಕೂಡ ನೋಡಲು ವಿರಾಟ್ ಅವರಂತೆ ಹೋಲುವ ಕಾರಣ ಅವರೇ ಸೂಕ್ತ ಎಂದೇನಿಸಿ ಸಿನಿಮಾ ಮಾಡುವ ಬಗ್ಗೆ ಮಾತುಕತೆ ಕೂಡ ನಡೆದಿದೆ ಎನ್ನಲಾಗುತ್ತಿದೆ.

ನವೆಂಬರ್ 5ಕ್ಕೆ ವಿರಾಟ್ ಹುಟ್ಟುಹಬ್ಬದಂದು ಅಧಿಕೃತ ಘೋಷಣೆ ಆಗುತ್ತದೆ ಎಂದು ಹೇಳಲಾಗುತ್ತಿದೆ.

Font Awesome Icons

Leave a Reply

Your email address will not be published. Required fields are marked *