ವಿಶ್ವದಾಖಲೆ ನಿರ್ಮಿಸಿದ 3ನೇ ತರಗತಿ ವಿದ್ಯಾರ್ಥಿಗೆ ‘Rising Star’ ಪ್ರಶಸ್ತಿ ಪ್ರದಾನ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಬೆಂಗಳೂರು,ಅಕ್ಟೋಬರ್, 28,2024 (www.justkannada.in): ಬೆಂಗಳೂರಿನಲ್ಲಿ ನೆಡೆದ  ಇನ್ ಸ್ಪಿರೇಶನ್ ಅವಾರ್ಡ್ ಅಂಡ್ ಸಮ್ಮಿಟ್ ನಲ್ಲಿ  ಪೃಥು ಪಿ ಅದ್ವೈತ್ ರವರನ್ನು ಕರ್ನಾಟಕ ಗ್ಲೋರಿ ಅವಾರ್ಡ್ -2024 ರಲ್ಲಿ Raising Star ” Excellence in Best Talented Rising Star of Karnataka”  ಎಂಬ ಬಿರುದು ಮತ್ತು ಪ್ರಶಸ್ತಿಯನ್ನು ವಿಶ್ರಾಂತ ಪೋಲೀಸ್ ವರಿಷ್ಠಾಧಿಕಾರಿ S B ಚಬ್ಬಿ ರವರು ನೀಡಿದರು.

ಮೈಸೂರಿನ ಪೂರ್ಣ ಚೇತನ ಪಬ್ಲಿಕ್ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿ ಪೃಥು ಪಿ ಅದ್ವೈತ್ ರವರು  30 ನಿಮಿಷದಲ್ಲಿ 150 ಶ್ಲೋಕಗಳನ್ನು ಪಠಿಸಿ ಏಕಕಾಲದಲ್ಲಿ ಮೂರು ವಿಶ್ವ ದಾಖಲೆ ನಿರ್ಮಿಸಿದ್ದರು.

ಇದನ್ನು ಗಮನಿಸಿದ ಇನ್ ಸ್ಪಿರೇಶನ್ ಅವಾರ್ಡ್ ಅಂಡ್ ಸಮ್ಮಿಟ್  ಸಂಸ್ಥೆಯು ಬೆಂಗಳೂರಿನಲ್ಲಿ ನಡೆದ ಇನ್ ಸ್ಪಿರೇಶನ್ ಅವಾರ್ಡ್ ಅಂಡ್ ಸಮ್ಮಿಟ್ ನ  Karnataka Glory Award 2024 ರಲ್ಲಿ ಮೈಸೂರಿನ ಪೃಥು ಪಿ ಅದ್ವೈತ್ ಗೆ  Rising Star ಎಂಬ ಪ್ರಶಸ್ತಿ ನೀಡಿ ಗೌರವಿಸಿದರು.

ಪ್ರಶಸ್ತಿ ಪ್ರದಾನ ಬಳಿಕ ಮಾತನಾಡಿದ ವಿಶ್ರಾಂತ ಪೋಲಿಸ್ ವರಿಷ್ಠಾಧಿಕಾರಿ S.B ಚಬ್ಬಿ ಮಕ್ಕಳ ಸಾಧನೆ ನೋಡುವುದೇ ಬಹಳ ಸಂತೋಷದ ವಿಷಯ. ಮಕ್ಕಳ ಪ್ರತಿಭೆಯನ್ನು ಗುರುತಿಸುವುದು ನಮ್ಮೆಲ್ಲರ ಕರ್ತವ್ಯ. ಏಳನೇ ವರ್ಷದಲ್ಲಿ ಈ ಅಪ್ರತಿಮ ಸಾಧನೆ ಮಾಡುವುದು ಸಾಧಾರಣ ವಿಷಯವಲ್ಲ. ಇವರಿಂದ ಸ್ಫೂರ್ತಿ ಪಡೆದು ಮತ್ತಷ್ಟು ಮಕ್ಕಳು ಸಾಧನೆಯ ಪಥ ತುಳಿಯಲಿ ಎಂದು ತಿಳಿಸಿದರು.

ಈ‌  ವೇಳೆ ಕರ್ನಾಟಕ ಗ್ಲೋರಿ ಅವಾರ್ಡ್ ನ ವ್ಯವಸ್ಥಾಪಕಿ ಶೃತಿ ರಾಕೇಶ್, ಪೋಲಿಸ್ ವರಿಷ್ಠಾಧಿಕಾರಿ ಎಸ್.ಬಿ. ಚಬ್ಬಿ, ಪೋಷಕರಾದ ಪುನೀತ್ ಜಿ, ಪೂಜಾ ಎನ್, ಉದ್ಯಮಿ ಪ್ರದೀಪ್ ದುಬೆ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

Key words:  Shlokas,mysore, boy, World Record, Karnataka Glory Award

Font Awesome Icons

Leave a Reply

Your email address will not be published. Required fields are marked *