ವಿಶ್ವದ ಮಾಜಿ ನಂ.1 ಚೆಸ್‌ ಆಟಗಾರನನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಿದ ರಷ್ಯಾ

ಮಾಸ್ಕೋ:  ರಷ್ಯಾದ ಹಣಕಾಸು ಕಾವಲು ಸಂಸ್ಥೆ ರೋಸ್‌ಫಿನ್‌ ಮಾನಿಟರಿಂಗ್ ಬುಧವಾರದಂದು ಚೆಸ್ ಗ್ರ್ಯಾಂಡ್ ಮಾಸ್ಟರ್ ಮತ್ತು ರಾಜಕೀಯ ಕಾರ್ಯಕರ್ತ ಗ್ಯಾರಿ ಕಾಸ್ಪರೋವ್ ಅವರನ್ನು ʻಭಯೋತ್ಪಾದಕ ಮತ್ತು ಉಗ್ರರʼ ಪಟ್ಟಿಗೆ ಸೇರಿಸಿದೆ.

ಇದಕ್ಕೆ ಕಾರಣವೇನೆಂದು ನೋಡುವುದಾದರೆ,60 ವರ್ಷದ ಈ ಮಾಜಿ ಚೆಸ್‌ ವಿಶ್ವ ಚಾಂಪಿಯನ್‌ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ವಿರುದ್ಧ ನಿರಂತರ ಧ್ವನಿ ಎತ್ತುತ್ತಿದ್ದಾರೆ ಮತ್ತು ಉಕ್ರೇನ್‌ ವಿರುದ್ಧದ ರಷ್ಯಾ ದಾಳಿಯನ್ನು ಖಂಡಿಸುತ್ತಲೇ ಬಂದಿದ್ದಾರೆ. ಹೀಗಾಗಿ ಅವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಕ್ರಮವಾಗಿ ಹಣ ವರ್ಗಾವಣೆ ಮಾಡುವುದು ಅಥವಾ ಉಗ್ರರಿಗೆ ಹಣ ಸಹಾಯ ಮಾಡುವುದು ಇಂತಹವುಗಳ ಮೇಲೆ ಕಣ್ಣಿಟ್ಟಿರುವ ರೋಸ್‌ಫಿನ್‌, ಮಾನಿಟರಿಂಗ್ ಪಟ್ಟಿ ಮಾಡಿದವರ ಬ್ಯಾಂಕ್ ಖಾತೆಗಳನ್ನು ವಶಪಡಿಸಿಕೊಳ್ಳುವ ಅಧಿಕಾರ ಹೊಂದಿದೆ. ಆದರೆ ಮಾಜಿ ಚೆಸ್‌ ಚಾಂಪಿಯನ್‌ನ್ನುಇಂತಹ ಯಾವುದೆ ಕಾರಣ ಇಲ್ಲದೆ ʻಭಯೋತ್ಪಾದಕ ಮತ್ತು ಉಗ್ರರʼ ಸೇರಿಸಿದೆ

ವಿಶ್ವದ ಶ್ರೇಷ್ಠ ಚೆಸ್ ಆಟಗಾರರಲ್ಲಿ ಒಬ್ಬರೆಂದು ಗುರುತಿಸ್ಪಡುವ ಕಾಸ್ಪರೋವ್ ಒಂದು ದಶಕಕ್ಕೂ ಹೆಚ್ಚು ಕಾಲ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿಂದಲೇ ಅವರು ತಮ್ಮ ರಾಜಕೀಯ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ ಅವರು ಉಕ್ರೇನ್‌ಗೆ ಬೆಂಬಲ ನೀಡುವಂತೆ ಪಶ್ಚಿಮ ರಾಷ್ಟ್ರಗಳನ್ನು ಒತ್ತಾಯಿಸಿದ್ದರು ಮತ್ತು ಉಕ್ರೇನ್ ಮಾಸ್ಕೋವನ್ನು ಸೋಲಿಸಬೇಕು ಎಂದು ಕರೆ ನೀಡಿದ್ದರು.

 

Font Awesome Icons

Leave a Reply

Your email address will not be published. Required fields are marked *