ವಿಶ್ವ ಕಂಡ ಅಪ್ರತಿಮ ಸ್ಪಿನ್ನರ್ಗಳಲ್ಲಿ ಮುತ್ತಯ್ಯ ಮುರಳೀಧರನ್ ಕೂಡ ಒಬ್ಬರು. ಶ್ರೀಲಂಕಾ ಪರ ಆಡಿದ್ದ ಅವರು, ಹಲವು ಸಾಧನೆ ಮಾಡಿದ್ದಾರೆ. ಅವರು ಬೌಲಿಂಗ್ಗೆ ಇಳಿದರೆ ಎದುರಾಳಿಗಳು ನಡುಗುತ್ತಿದ್ದರು.
ಅವರ ಕುರಿತು ಈಗ ಬಯೋಪಿಕ್ ಸಿದ್ಧಗೊಳ್ಳುತ್ತಿದೆ. ಈ ಚಿತ್ರಕ್ಕೆ ‘800’ ಎಂದು ಶೀರ್ಷಿಕೆ ಇಡಲಾಗಿದೆ. ಬಹುಭಾಷೆಯಲ್ಲಿ ನಿರ್ಮಾಣ ಆಗಿರುವ ಈ ಚಿತ್ರದ ಟ್ರೇಲರ್ ಗಮನ ಸೆಳೆದಿದೆ. ಈ ಸಿನಿಮಾ ಅಕ್ಟೋಬರ್ 6ರಂದು ರಿಲೀಸ್ ಆಗಲಿದೆ. ಈ ಕುರಿತು ತಂಡ ಮಾಹಿತಿ ನೀಡಿದೆ.
‘800’ ಚಿತ್ರಕ್ಕೆ ಎಂ.ಎಸ್. ಶ್ರೀಪತಿ ನಿರ್ದೇಶನದಲ್ಲಿ ಮಾಡಿದ್ದಾರೆ. ಗಿಬ್ರಾನ್ ಅವರ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಸ್ಲಂ ಡಾಗ್ ಮಿಲಿಯನೇರ್’ ಸಿನಿಮಾದಲ್ಲಿ ನಟಿಸಿದ್ದ ಮಧುರ್ ಮಿತ್ತಲ್ ‘800’ ಚಿತ್ರದಲ್ಲಿ ಮುಖ್ಯಭೂಮಿಕೆ ಮಾಡಿದ್ದಾರೆ.
ಮುತ್ತಯ್ಯ ಅವರ ಪತ್ನಿಯ ಪಾತ್ರಕ್ಕೆ ಮಹಿಮಾ ನಂಬಿಯಾರ್ ನಟಿಸಿದ್ದಾರೆ. ತಮಿಳು, ತೆಲುಗು, ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಸಿನಿಮಾ ಮೂಡಿಬರುತ್ತಿದೆ.