ಮುಂಬೈ: ನಟ ರಜನಿಕಾಂತ್ ಅವರಿಗೆ ದೇಶ ವಿದೇಶಗಳಲ್ಲಿಯೂ ಅಭಿಮಾನಿಗಳ ಸಮೂಹವಿದೆ. ಇತ್ತೀಚೆಗಷ್ಟೆ ಥೇಟ್ ಅವರಂತೆಯೇ ಇರುವ ವ್ಯಕ್ತಿಯೊಬ್ಬರು ಕೇರಳದಲ್ಲಿ ಚಹಾ ಅಂಗಡಿ ಇಟ್ಟುಕೊಂಡಿರುವ ವಿಡಿಯೋವೊಂದು ವೈರಲ್ ಆಗಿತ್ತು. ಅಂತಹ ರಜನಿಕಾಂತ್ ಗೆ ಈಗ 72 ವರ್ಷ ವಯಸ್ಸು. ಆದರೂ ಅವರಿಗೆ ಸಿನಿಮಾ ಮೇಲಿನ ಆಸಕ್ತಿ ಒಂದಿನಿತೂ ಕಡಿಮೆಯಾಗಿಲ್ಲ.
ನಟ ಅಮಿತಾಭ್ ಬಚ್ಚನ್ ಜೊತೆ ಅವರ ಹೊಸ ಸಿನಿಮಾ ಅನೌನ್ಸ್ ಆಗಿತ್ತು. ಈಗ ಆ ಸಿನಿಮಾದ ಶೂಟಿಂಗ್ ಆರಂಭ ಆಗಿದೆ. ಈ ಖುಷಿಯ ಸಂದರ್ಭದಲ್ಲಿ ಅಮಿತಾಭ್ ಬಚ್ಚನ್ ಮತ್ತು ರಜನಿಕಾಂತ್ ಅವರು ಜೊತೆಯಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ರಜನಿಕಾಂತ್ ಅವರು ‘ನನ್ನ ಹೃದಯ ಖುಷಿಯಿಂದ ಬಡಿದುಕೊಳ್ಳುತ್ತಿದೆ’ ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳ ವಲಯದಲ್ಲಿ ಈ ಫೋಟೋ ವೈರಲ್ ಆಗುತ್ತಿದೆ.
33 ವರ್ಷಗಳ ಬಳಿಕ ನಾನು ನನ್ನ ಗುರು ಜೊತೆ ಕೆಲಸ ಮಾಡುತ್ತಿದ್ದೇನೆ’ ಎಂಬ ಕ್ಯಾಪ್ಷನ್ ಜೊತೆಯಲ್ಲಿ ರಜನಿಕಾಂತ್ ಅವರು ಈ ಫೋಟೋ ಹಂಚಿಕೊಂಡಿದ್ದಾರೆ. ಇದನ್ನು ಕಂಡು ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ತಮಗಿಂತ 9 ವರ್ಷ ಹಿರಿಯರಾದ ಅಮಿತಾಭ್ ಬಚ್ಚನ್ಗೆ ರಜನಿಕಾಂತ್ ನೀಡಿದ ಗೌರವ ನೋಡಿ ಎಲ್ಲರೂ ಫಿದಾ ಆಗಿದ್ದಾರೆ. ಒಟ್ಟಿನಲ್ಲಿ ಗುರುಶಿಷ್ಯರ ಫೋಟೋ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
After 33 years, I am working again with my mentor, the phenomenon, Shri Amitabh Bachchan in the upcoming Lyca’s “Thalaivar 170” directed by T.J Gnanavel. My heart is thumping with joy!@SrBachchan @LycaProductions @tjgnan#Thalaivar170 pic.twitter.com/RwzI7NXK4y
— Rajinikanth (@rajinikanth) October 25, 2023