ನವದಹಲಿ : ರದ್ದುಗೊಂಡಿರುವ ವಿವಾದಿತ 3 ಕೃಷಿ ಕಾಯ್ದೆಗಳನ್ನು ಸರಕಾರ ವಾಪಸ್ ತರಬೇಕೆಂದು ಆಗ್ರಹಿಸಿದ್ದ ಸಂಸದೆ ಕಂಗನಾ ರಣಾವತ್ ಅವರು ವ್ಯಾಪಕ ವಿರೋಧ ವ್ಯಕ್ತವಾದ ಬಳಿಕ ಬುಧವಾರ(ಸೆ25) ಹೇಳಿಕೆ ಹಿಂಪಡೆದುಕೊಂಡಿದ್ದಾರೆ.
ಎಕ್ಸ್ ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಕಂಗನಾ “ಕಳೆದ ಕೆಲ ದಿನಗಳಲ್ಲಿ ಮಾಧ್ಯಮಗಳು ಕೃಷಿ ಕಾಯ್ದೆಗಳ ಬಗ್ಗೆ ನನಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದವು. ಕೃಷಿ ಕಾಯ್ದೆಗಳ ಕಾನೂನನ್ನು ಮರಳಿ ತರುವಂತೆ ರೈತರು ಪ್ರಧಾನಿ ಮೋದಿಯವರಿಗೆ ಮನವಿ ಮಾಡಬೇಕೆಂದು ನಾನು ಸಲಹೆ ನೀಡಿದ್ದೇನೆ. ನನ್ನ ಹೇಳಿಕೆಯಿಂದ ಅನೇಕ ಜನರು ನಿರಾಶೆಗೊಂಡಿದ್ದಾರೆ. ರೈತರ ಕಾನೂನನ್ನು ಪ್ರಸ್ತಾಪಿಸಿದಾಗ, ನಮ್ಮಲ್ಲಿ ಅನೇಕರು ಅದನ್ನು ಬೆಂಬಲಿಸಿದರು ಆದರೆ ನಮ್ಮ ಪ್ರಧಾನ ಮಂತ್ರಿಗಳು ಅದನ್ನು ಬಹಳ ಸೂಕ್ಷ್ಮವಾಗಿ ಮತ್ತು ಸಹಾನುಭೂತಿಯಿಂದ ಹಿಂತೆಗೆದುಕೊಂಡರು ಮತ್ತು ಅವರ ಮಾತುಗಳ ಘನತೆಯನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ” ಎಂದು ಹೇಳಿದ್ದಾರೆ.
ನಾನು ಕೇವಲ ಕಲಾವಿದೆಯಲ್ಲ. ಬಿಜೆಪಿ ಕಾರ್ಯಕರ್ತೆ.ಪಕ್ಷದ ನಿಲುವು ನನ್ನ ಅಭಿಪ್ರಾಯವಾಗಬೇಕು.ಹಾಗಾಗಿ ನನ್ನ ಮಾತುಗಳು ಮತ್ತು ನನ್ನ ಆಲೋಚನೆಗಳಿಂದ ನಾನು ಯಾರನ್ನಾದರೂ ನೋವುಂಟು ಮಾಡಿದರೆ, ನಾನು ಕ್ಷಮೆಯಾಚಿಸುತ್ತೇನೆ ಮತ್ತು ನನ್ನ ಮಾತುಗಳನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.