ಶಕ್ತಿ ಯೋಜನೆ ಮುಂದುವರೆಸುವ ಕುರಿತು ಮರುಪರಿಶೀಲನೆ- ಡಿಸಿಎಂ ಡಿಕೆ ಶಿವಕುಮಾರ್ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್





ಬೆಂಗಳೂರು,ಅಕ್ಟೋಬರ್,31,2024 (www.justkannada.in):  ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿಯೋಜನೆ ಮರುಪರಿಶೀಲನೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ನಾವು ಉಚಿತ ಬಸ್ ಕೇಳಿಲ್ಲ , ಫ್ರಿಬಸ್ ಬೇಡ ನಾವು ಹಣ  ನೀಡಿ ಟಿಕೆಟ್ ಪಡೆದು ಪ್ರಯಾಣಿಸುತ್ತೇವೆ ಎಂದು ಹಲವು ಮಹಿಳೆಯರು ಟ್ವಿಟ್ ಮೇಲ್ ಮಾಡಿದ್ದಾರೆ. ನಮಗೆ ಉಚಿತ ಬಸ್ ಪ್ರಯಾಣ ಬೇಡ ಅಂತಿದ್ದಾರೆ . ಈ ಕುರಿತು ಮರುಪರಿಶೀಲನೆ ಮಾಡಲಾಗುತ್ತದೆ ಎಂದಿದ್ದಾರೆ.

ಉಚಿತ ಬಸ್ ಪ್ರಯಾಣ ಬೇಕಿರಲಿಲ್ಲ ನಮಗೆ ಟಿಕೆಟ್ ತೆಗೆದುಕೊಂಡು ಬಸ್ ಗಳಲ್ಲಿ ಪ್ರಯಾಣ ಮಾಡುವ ಶಕ್ತಿ ಇದೆ. ಹೀಗಾಗಿ ಉಚಿತ ಬಸ್ ಪ್ರಯಾಣ ಬೇಡ ಅಂತಿದ್ದಾರೆ. ಶೇ.5ರಿಂದ 10 ರಷ್ಟು ಮಹಿಳೆಯರು ಹೀಗೆ ಹೇಳುತ್ತಿದ್ದಾರೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಜೊತೆ ಚರ್ಚಿಸುತ್ತೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

Key words: Review, continuation, Shakti Yojana- DCM, DK Sivakumar






Previous articleಪಟ್ಟಣ ಪಂಚಾಯಿತಿ ಕಾರ್ಯಾಲಯ, ಬೋಗಾದಿ, ಮೈಸೂರು ಜಿಲ್ಲೆ


Font Awesome Icons

Leave a Reply

Your email address will not be published. Required fields are marked *