ಶಾಲಾ ಶಿಕ್ಷಕಿ ಬಂಧನ – ನ್ಯೂಸ್ ಕರ್ನಾಟಕ ಕನ್ನಡ (News Karnataka Kannada)

ಕಾಸರಗೋಡು : ಉದ್ಯೋಗದ  ಭರವಸೆ ನೀಡಿ  ಲಕ್ಷಾಂತರ ರೂ . ವಂಚಿಸಿದ ಪ್ರಕರಣದ ಆರೋಪಿ ಯಾಗಿರುವ ಶಾಲಾ ಶಿಕ್ಷಕಿಯನ್ನು   ವಿದ್ಯಾನಗರ ಠಾಣಾ ಪೊಲೀಸರು ಗುರುವಾರ ಸಂಜೆ ಬಂಧಿಸಿದ್ದಾರೆ.

ಪೆರ್ಲ ಶೇಣಿ ಬಲ್ತಕ್ಕಲ್ ನ  ಸಚಿತಾ ರೈ  ( ೨೭) ಬಂಧಿತಳು. ೧೨ ಕ್ಕೂ ಅಧಿಕ ವಂಚನೆ ಪ್ರಕರಣದ ಆರೋಪಿಯಾಗಿದ್ದಾಳೆ. ಉಪ್ಪಿನಂಗಡಿ, ಬದಿಯಡ್ಕ, ಕುಂಬಳೆ, ಮಂಜೇಶ್ವರ, ಕಾಸರಗೋಡು, ಆದೂರು, ಮೇಲ್ಪರಂಬ ಠಾಣೆ ಗಳಲ್ಲಿ ಈಕೆಯ ವಿರುದ್ಧ ಪ್ರಕರಣ ದಾಖಲಾಗಿವೆ.  ತಲೆಮರೆಸಿಕೊಂಡಿದ್ದ ಈಕೆ

ಗುರುವಾರ ಸಂಜೆ  ನ್ಯಾಯಾಲಯಕ್ಕೆ ಶರಣಾಗಲು ಆಗಮಿಸುತ್ತಿದ್ದಾಗ ವಿದ್ಯಾನಗರ ಠಾಣಾ ಪೊಲೀಸರು ಈಕೆಯನ್ನು ಬಂಧಿಸಿದ್ದರು. ಸಿಪಿಸಿಆರ್ ಐ , ಕೇಂದ್ರ ವಿದ್ಯಾಲಯ , ಕರ್ನಾಟಕ ಅಬಕಾರಿ ಇಲಾಖೆ ,  ಅರಣ್ಯ  ಇಲಾಖೆ , ಎಸ್ ಬಿ  ಐ ಮೊದಲಾದೆಡೆಗಳಲ್ಲಿ ಉದ್ಯೋಗ ನೀಡುವುದಾಗಿ  ಲಕ್ಷಾಂತರ ರೂ . ಪಡೆದು ವಂಚಿಸಿದ್ದಳು.  ಕುಂಬಳೆ ಕಿದೂರಿನ ನಿಶ್ಮಿತಾ ಶೆಟ್ಟಿ  ವಂಚನೆ ಬಗ್ಗೆ ಮೊದಲ ದೂರು ದಾಖಲಿಸಿದ್ದರು.

ಬಳಿಕ ಒಂದೊಂದೇ ಪ್ರಕರಣ ಬೆಳಕಿಗೆ ಬಂದಿತ್ತು.   ಸಿ ಪಿ ಸಿ ಆರ್ ಐ ನಲ್ಲಿ ಉದ್ಯೋಗ ನೀಡುವುದಾಗಿ ಸುಮಾರು ೧೫ ಲಕ್ಷಕ್ಕೂ ಅಧಿಕ ಹಲವನ್ನು ಪಡೆದು ನಿಶ್ಮಿತಾ ಶೆಟ್ಟಿ ರವರಿಗೆ ವಂಚಿಸಿದ್ದ ಳು.  ಕೇಂದ್ರ ವಿದ್ಯಾಲಯದಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ  ದೇಲಂಪಾಡಿಯ ಸುಚಿತ್ರಾ ರಾವರಿದ  ೭, ೩೧, ೫೦೦ ರೂ . ಪಡೆದು ವಂಚಿಸಿದ್ದಳು.

ಸಚಿತಾ ರೈ ಯನ್ನು ಹೆಚ್ಚಿನ ಮಾಹಿತಿ ಪೊಲೀಸರು ಕಲೆ ಹಾಕುತ್ತಿದ್ದಾರೆ.  ತನಿಖೆ  ಯಿಂದ ಇನ್ನಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ ಡಿ ವೈ ಎಫ್ ಐ ಜಿಲ್ಲಾ ಸಮಿತಿ ಮಾಜಿ ಸದಸ್ಯೆ  ಯಾಗಿರುವ  ಸಚಿತಾ ರೈ , ಬಾಡೂರು   ಶಾಲೆಯ ಶಿಕ್ಷಕಿಯಾಗಿದ್ದಾಳೆ.

 

Font Awesome Icons

Leave a Reply

Your email address will not be published. Required fields are marked *