ಹೈದರಾಬಾದ್: ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆದ ‘ಹನುಮಾನ್’ ಸಿನಿಮಾವನ್ನು ಜನರು ಗೆಲ್ಲಿಸಿದ್ದಾರೆ. ಈ ಸಿನಿಮಾ ಬಗ್ಗೆ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಈಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಸಿನಿಮಾವನ್ನು ಹೊಗಳಿದ್ದಾರೆ. ಹೈದರಾಬಾದ್ನಲ್ಲಿ ಅಮಿತ್ ಶಾ ಅವರನ್ನು ‘ಹನುಮಾನ್’ ತಂಡದವರು ಭೇಟಿ ಮಾಡಿದ್ದಾರೆ.
ಪಕ್ಷದ ಮೀಟಿಂಗ್ ಸಲುವಾಗಿ ಅಮಿತ್ ಶಾ ಅವರು ಹೈದರಾಬಾದ್ಗೆ ಆಗಮಿಸಿದ್ದರು. ಈ ವೇಳೆ ಅವರನ್ನು ಭೇಟಿ ಆಗುವ ಅವಕಾಶ ‘ಹನುಮಾನ್’ ತಂಡಕ್ಕೆ ಸಿಕ್ಕಿದೆ. ಗೃಹ ಸಚಿವರಿಗೆ ಆಂಜನೇಯನ ಮೂರ್ತಿ ಇರುವ ಸ್ಮರಣಿಕೆಯನ್ನು ನೀಡಲಾಗಿದೆ. ಆ ಸಂದರ್ಭದ ಫೋಟೋ ವೈರಲ್ ಆಗಿದೆ.
‘ಹನುಮಾನ್’ ತಂಡದ ಭೇಟಿಯ ಬಳಿಕ ಅಮಿತ್ ಶಾ ಅವರು ‘ಎಕ್ಸ್’ (ಟ್ವಿಟರ್) ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ‘ಇತ್ತೀಚೆಗೆ ಸೂಪರ್ ಹಿಟ್ ಆದ ಹನುಮಾನ್ ಸಿನಿಮಾದ ನಿರ್ದೇಶಕ ಪ್ರಶಾಂತ್ ವರ್ಮಾ, ಪ್ರತಿಭಾವಂತ ನಟ ತೇಜ ಸಜ್ಜಾ ಅವರನ್ನು ಭೇಟಿ ಮಾಡಿದೆ. ಭಾರತದ ಧಾರ್ಮಿಕ ಪರಂಪರೆಯನ್ನು ತೋರಿಸುವಲ್ಲಿ ಈ ಚಿತ್ರತಂಡದವರು ಉತ್ತಮವಾದ ಕೆಲಸ ಮಾಡಿದ್ದಾರೆ. ಅವರ ಮುಂದಿನ ಸಿನಿಮಾಗಳಿಗೆ ಶುಭವಾಗಲಿ’ ಎಂದು ಅಮಿತ್ ಶಾ ಪೋಸ್ಟ್ ಮಾಡಿದ್ದಾರೆ. ತಂಡದ ಜೊತೆಗಿನ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.
ಈ ಭೇಟಿಯ ಸಂದರ್ಭದಲ್ಲಿ ನಿರ್ಮಾಪಕ ಕೆ. ನಿರಂಜನ್ ರೆಡ್ಡಿ, ಕೇಂದ್ರ ಸಚಿವ ಜಿ. ಕೃಷ್ಣ ರೆಡ್ಡಿ ಕೂಡ ಜೊತೆಯಲ್ಲಿ ಇದ್ದರು.
Met the talented actor Shri @tejasajja123 and film director Shri @PrasanthVarma of the recent superhit movie Hanuman.
The team has done a commendable job of showcasing Bharat’s spiritual traditions and the superheroes that have emerged from them. Best wishes to the team for… pic.twitter.com/pt8gNy9Rbh
— Amit Shah (Modi Ka Parivar) (@AmitShah) March 12, 2024