ಉತ್ತರ ಪ್ರದೇಶ : ಏರ್ ಇಂಡಿಯಾ, ಸ್ಪೈಸ್ ಜೆಟ್, ಇಂಡಿಗೋ, ಸೇರಿದಂತೆ ಹಲವು ವಿಮಾನಯಾನ ಸೇವೆಗಳ ನಂತರ ಈಗ ಹೊಸದೊಂದು ಏರ್ಲೈನ್ಸ್ ಭಾರತದ ಆಕಾಶದಲ್ಲಿ ಕಾರ್ಯಾಚರಣೆ ನಡೆಸಲಿದೆ. ಅದೇ ಶಂಖ ಏರ್ಲೈನ್ಸ್. ಇದು ಭಾರತದ ಉತ್ತರ ಪ್ರದೇಶ ಮೂಲದ ಹೊಸ ದೇಶೀಯ ವಿಮಾನಯಾನ ಸೇವೆಯಾಗಿದೆ. ಅಲ್ಲದೇ ಇದು ಆ ರಾಜ್ಯದಿಂದ ಬರುತ್ತಿರುವ ಮೊದಲ ವಿಮಾನಯಾನ ಸೇವೆಯಾಗಿದೆ.
ನೋಯ್ಡಾದಲ್ಲಿ ಸರ್ಕಾರವು ನಿರ್ಮಿಸುತ್ತಿರುವ ಹೊಸ ವಿಮಾನ ನಿಲ್ದಾಣವನ್ನು ಈ ಶಂಖ ವಾಯುಯಾನ ಸಂಸ್ಥೆಯೂ ತನ್ನ ಪ್ರಮುಖ ಕೇಂದ್ರವಾಗಿಸಿಕೊಳ್ಳಲಿದೆ. ಶಂಖ್ ಏರ್ ಈಗ ಬೋಯಿಂಗ್ 737-800ಎನ್ಜಿ ಹೆಸರಿನ ವಿಮಾನದಲ್ಲಿ ಕಾರ್ಯಾಚರಣೆ ಆರಂಭಿಸಲು ಸಜ್ಜಾಗಿದೆ. ಇದಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದಿಂದ ನಿರಾಕ್ಷೇಪಣೆ ಪ್ರಮಾಣೀಕರಣ ಪಡೆಯುವ ಪ್ರಕ್ರಿಯೆಯು ಆರಂಭವಾಗಿದೆ.
ಶಂಖ್ ಏರ್ಲೈನ್ಸ್ನ ಸ್ಥಾಪಕರು ಯಾರು: ಶರ್ವನ್ ಕುಮಾರ್ ವಿಶ್ವಕರ್ಮ ಅವರು ಈ ಶಂಖ್ ವಿಮಾನಯಾನ ಕಂಪನಿ ಸ್ಥಾಪಕರಾಗಿದ್ದಾರೆ. ಅವರ ಸಂಸ್ಥೆಯ ಮ್ಯಾನೇಜ್ಮೆಂಟ್ ತಂಡವು ಇತ್ತೀಚೆಗೆ ಏರ್ಪೋರ್ಡ್ನ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ವಿಮಾನ ಕಾರ್ಯಾಚರಣೆ ಯೋಜನೆಯ ಬಗ್ಗೆ ಖಚಿತಪಡಿಸಿದ್ದಾರೆ.