ಶೋಲೆ ಖ್ಯಾತಿಯ ಸತೀಂದರ್‌ ಕುಮಾರ್‌ ಖೋಸ್ಲಾ ವಿಧಿವಶ

ಬಾಲಿವುಡ್‌ ಚಿತ್ರರಂಗದ ಹಿರಿಯ ನಟ, ‘ಶೋಲೆ’ ಖ್ಯಾತಿಯ ಸತೀಂದರ್‌ ಕುಮಾರ್‌ ಖೋಸ್ಲಾ ಮಂಗಳವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸತೀಂದರ್‌ ಕುಮಾರ್‌ ಅವರು ಹಾಸ್ಯಪಾತ್ರಕ್ಕೆ ಹೆಸರಾಗಿದ್ದರು. ಉಪ್‌ಕಾರ್‌, ರೋಟಿ ಕಪ್ಡಾ ಔರ್‌ ಮಕಾನ್‌, ಕ್ರಾಂತಿ, ನಸೀಬ್‌, ಯಾರಾನಾ, ಹಮ್‌ ಹೈ ರಹಿ ಪ್ಯಾರ್‌ ಕೆ, ಅಂಜಾಮ್‌ ಸೇರಿ ಅನೇಕ ಸಿಇಮಾಗಳಲ್ಲಿ ಸತೀಂದರ್‌ ಕುಮಾರ್‌ ನಟಿಸಿದ್ದಾರೆ.

ಸತೀಂದರ್‌ ಕುಮಾರ್‌ ಬೀರಬಲ್‌ ಎಂದೇ ಹೆಸರಾಗಿದ್ದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಸತೀಂದರ್‌ ಕುಮಾರ್‌ ಅವರು ಹಾಸ್ಯಪಾತ್ರಕ್ಕೆ ಹೆಸರಾಗಿದ್ದರು.

ಉಪ್‌ಕಾರ್‌, ರೋಟಿ ಕಪ್ಡಾ ಔರ್‌ ಮಕಾನ್‌, ಕ್ರಾಂತಿ, ನಸೀಬ್‌, ಯಾರಾನಾ, ಹಮ್‌ ಹೈ ರಹಿ ಪ್ಯಾರ್‌ ಕೆ, ಅಂಜಾಮ್‌ ಸೇರಿ ಅನೇಕ ಸಿಇಮಾಗಳಲ್ಲಿ ಸತೀಂದರ್‌ ಕುಮಾರ್‌ ನಟಿಸಿದ್ದಾರೆ. ‘ಶೋಲೆ’ ಚಿತ್ರದ ಕೈದಿ ಪಾತ್ರದಲ್ಲಿ ಕೂಡಾ ಸತೀಂದರ್‌ ಗಮನ ಸೆಳೆದಿದ್ದರು.

ಹಿಂದಿ ಮಾತ್ರವಲ್ಲದೆ ಪಂಜಾಬಿ, ಮರಾಠಿ, ಭೋಜ್‌ಪುರಿ ಭಾಷೆಗಳ ಸಿನಿಮಾಗಳಲ್ಲಿ ಕೂಡಾ ಸತೀಂದರ್‌ ಕುಮಾರ್‌ ಖೋಸ್ಲಾ ನಟಿಸಿದ್ದಾರೆ.  ಎಲ್ಲಾ ಭಾಷೆಗಳೂ ಸೇರಿ ಒಟ್ಟು 500 ಸಿನಿಮಾಗಳಲ್ಲಿ ಸತೀಂದರ್‌ ಕುಮಾರ್‌ ಖೋಸ್ಲಾ ನಟಿಸಿದ್ದಾರೆ. ಸತೀಂದರ್‌ ನಿಧನಕ್ಕೆ ಬಾಲಿವುಡ್‌ ಮಂದಿ ಸಂತಾಪ ಸೂಚಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *