ಶ್ರೀನಿವಾಸ್ ಪ್ರಸಾದ್ ಜೊತೆ ಮಾತುಕತೆ ಕುರಿತು ಸ್ಪಷ್ಟನೆ: ಅಮಿತ್ ಶಾ ಬಗ್ಗೆ ಪುತ್ರನ ಹೇಳಿಕೆ ಸಮರ್ಥಿಸಿಕೊಂಡ ಸಿಎಂ ಸಿದ್ದರಾಮಯ್ಯ. – Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

kannada t-shirts

ಮೈಸೂರು, ಏಪ್ರಿಲ್,1, 2024 (www.justkannada.in): ವಿ.ಶ್ರೀನಿವಾಸ್ ಪ್ರಸಾದ್‌ ಜತೆ ನಾನು ಮಾತನಾಡಿಲ್ಲ. ನಾನು ಭೇಟಿಯಾಗಿಲ್ಲ. ದೂರವಾಣಿ ಮೂಲಕವೂ ಮಾತನಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

ಮೈಸೂರಿನಲ್ಲಿ ಈ ಕುರಿತು ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಚಿವರಾದ ಡಾ.ಮಹದೇವಪ್ಪ, ಕೆ.ವೆಂಕಟೇಶ್ ಹೋಗಿ ಭೇಟಿ ಆಗಿದ್ದಾರೆ. ಏನು ಹೇಳಿದ್ದಾರೆ ಅಂತ ಅವರನ್ನೇ ಕೇಳಿ.  ಕಾಂಗ್ರೆಸ್ ಪಕ್ಷಕ್ಕೆ ಅನೇಕರು ಬರುತ್ತಾರೆ. ಪಕ್ಷದ ಸಿದ್ಧಾಂತ, ನಾಯಕತ್ವ ಒಪ್ಪಿ ಯಾರೇ ಬಂದರೂ ಸ್ವಾಗತ ಎಂದರು.

ಸಿಬಿಐ ಹೇಳಿರುವುದನ್ನ ಯತೀಂದ್ರ ಹೇಳಿದ್ದಾನೆ.

ಅಮಿತ್ ಶಾ ಗೂಂಡಾ ಎಂಬ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಸಮರ್ಥಿಸಿಕೊಂಡ ಸಿಎಂ‌ ಸಿದ್ದರಾಮಯ್ಯ, ಯತೀಂದ್ರ ಹೇಳಿದ್ದರಲ್ಲಿ ತಪ್ಪೇನಿದೆ. ಸಿಬಿಐ ಹೇಳಿರುವುದನ್ನ ಯತೀಂದ್ರ ಹೇಳಿದ್ದಾನೆ. ಅದು ಅವನು ಬಳಸಿರುವ ಪದ ಅಲ್ಲ. ಸಿಬಿಐ ವರದಿಯಲ್ಲಿರುವ ಪದ. ಅದನ್ನೇ ಅವನು ಉಲ್ಲೇಖಿಸಿದ್ದಾನೆ. ಬಿಜೆಪಿಗೆ ಸಂಸ್ಕಾರವೇ ಗೊತ್ತಿಲ್ಲ. ಅವರು ಯತೀಂದ್ರಗೆ ಸಂಸ್ಕಾರ ಹೇಳಿಕೊಡಲು ಬಂದಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷಕ್ಕೆ ಅನೇಕರು ಬರುತ್ತಾರೆ.  ಪಕ್ಷದ ಸಿದ್ಧಾಂತ, ನಾಯಕತ್ವ ಒಪ್ಪಿ ಯಾರೇ ಬಂದರೂ ಸ್ವಾಗತ. ಮೈಸೂರು ಚಾಮರಾಜನಗರ ಎರೆಡು ಕ್ಷೇತ್ರವನ್ನ ಗೆದ್ದೆ ಗೆಲ್ಲುತ್ತೇವೆ. ಮೈಸೂರು ಮಾತ್ರವೇ ನನಗೆ ಮುಖ್ಯವಲ್ಲ. ಎಲ್ಲಾ ಕ್ಷೇತ್ರಗಳು ಬಹಳ ಮುಖ್ಯ. ಎಲ್ಲಾ ಕ್ಷೇತ್ರಗಳಿಗೆ ಸಾಧ್ಯವಾದಷ್ಟು ಹೋಗುತ್ತೇನೆ ಎಂದರು.

ಜೆಡಿಎಸ್ ಬಿಜೆಪಿ ಮೈತ್ರಿ ಉತ್ತಮವಾಗಿರುತ್ತೆ ಎಂಬ ದೋಸ್ತಿಗಳ ಹೇಳಿಕೆಗೆ ವ್ಯಂಗ್ಯವಾಡಿದ ಸಿಎಂ ಸಿದ್ದರಾಮಯ್ಯ, ಜೆಡಿಎಸ್ ಮೈತ್ರಿ ಹೇಗಿರುತ್ತೆ ಎಂಬುದು ಗೊತ್ತಿದೆ. ಕಳೆದ ಭಾರಿಯೇ ಅದನ್ನ ನಮಗೆ ತೋರಿಸಿದ್ದಾರೆ. ಇವರಿಬ್ಬರ ಮೈತ್ರಿಯೂ ಹೇಗಿರುತ್ತೆ ಎಂಬುದು ಗೊತ್ತಿದೆ ಎಂದು ಲೇವಡಿ ಮಾಡಿದರು.

Key words: CM, Siddaramaiah, Yathindra, mysore

website developers in mysore

Font Awesome Icons

Leave a Reply

Your email address will not be published. Required fields are marked *