ಶ್ರೀರಾಮಸೇನೆ ಕರೆ – ನ್ಯೂಸ್ ಕರ್ನಾಟಕ ಕನ್ನಡ (News Karnataka Kannada)

ಉಡುಪಿ: ದೀಪಾವಳಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಹಿಂದೂ ಸಂಘಟನೆಗಳು‌ ಮತ್ತೆ ಧರ್ಮ ದಂಗಲ್ ನಡೆಸೊಕೆ ಸಜ್ಜುಗೊಂಡಿದೆ. ದೀಪಾವಳಿ ಹಬ್ಬ ಸಂದರ್ಭದಲ್ಲಿ ಯಾರು ಕೂಡ ಅನ್ಯ ಧರ್ಮಿಯ ಜೊತೆಗೆ ವ್ಯಾಪಾರ ವಹಿವಾಟು ನಡೆಸಬಾರದು ಎಂದು ಶ್ರೀ ರಾಮ ಸೇನೆ ಕರೆನೀಡಿದೆ.

ದೀಪಾವಳಿ ಹಬ್ಬ ಅಂದ್ರೆ ದೀಪವನ್ನು ಬೆಳಕನ್ನು , ಭೂಮಿಯನ್ನು, ಗೋವು ಮಾತೆಯನ್ನು ಪೂಜಿಸುವ ಹಬ್ಬ. ಹೀಗಾಗಿ ಅನ್ಯ ಧರ್ಮೀಯರಿಂದ ಖರೀದಿ‌ಮಾಡಬಾರದು. ಹಿಂದೂಗಳು ಅಂಗಡಿ ಖರೀದಿ ಮಾಡಬೇಕು. ಹಿಂದೂ ವ್ಯಾಪಾರಿಗಳಿಗೆ ಹೋಗುವ ಹಣ, ಹಿಂದೂ ಸಮಾಜದ ಉದ್ದಾರಕ್ಕೆ ಉಪಯೋಗವಾಗುತ್ತದೆ. ಅನ್ಯಧರ್ಮಿಯರ ಜೊತೆಗೆ ವ್ಯಾಪಾರ ನಡೆಸಿದ್ರೆ ಆ ಹಣ ಸಮಾಜಘಾತು ಚಟುವಟಿಕೆಗಳಿಗೆ ಬಳಕೆಯಾಗುತ್ತದೆ.

ವಕ್ಫ್ ಹೆಸರಲ್ಲಿ ರೈತರ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವ ಮೂಲಕ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ ರೈತರಿಗೆ ಅನ್ಯಾಯ ಮಾಡುತ್ತಿದೆ. ರೈತರಿಗೆ ದ್ರೋಹ ಮಾಡುವ, ಗೋವು ವಧೆ ನಡೆಸಿ ಭಕ್ಷಿಸುವವರಿಗೆ ದೀಪಾವಳಿ ಹಬ್ಬ ವೇಳೆ ಯಾವುದೇ ಬೆಂಬಲವನ್ನು ನೀಡಬಾರದು. ಅಂತಹ ಅನ್ಯಕೋಮಿನ ಜೊತೆಗೆ ವ್ಯವಹಾರ ನಡೆಸಿದ್ರೆ ಪರೋಕ್ಷವಾಗಿ ಹಿಂದೂ ಧರ್ಮನಾಶಕ್ಕೆ ನಾವೇ ಅವಕಾಶ ಮಾಡಿ ಕೊಟ್ಟಂತಾಗುತ್ತದೆ ಎಂಬ ವಾದವನ್ನು ಮುಂದಿಟ್ಟುಕೊಂಡು ಹಿಂದು ಸಂಘಟನೆಗಳು ದೀಪಾವಳಿ ಹಬ್ಬದ ವೇಳೆ ಅನ್ಯ ಧರ್ಮೀಯರಿಗೆ ವ್ಯಾಪಾರ ಬಹಿಷ್ಕಾರ ಕ್ಕೆ ನಿರ್ಧರಿಸಿದೆ.

ಹಿಂದೂ ದೇವರು ಹೆಸರು ಬಳಸಿ ಅಂಗಡಿಗಳನ್ನು ತೆಗೆಯಲಾಗುತ್ತದೆ. ನಗದು ನೀಡಿ ವಸ್ತು ಖರೀದಿ ಮಾಡಿದಾಗ ನಿಜ ಹೊರಬರುವುದಿಲ್ಲ. ಸ್ಕ್ಯಾನ್ ಮೂಲಕ ಹಣ ಪೇ ಮಾಡಿದ ಅಂಗಡಿ ಮಾಲೀಕ ವಿವರ ಸಿಗುತ್ತದೆ. ಆಗ ಅನ್ಯಕೋಮಿನ ಮಾಲೀಕರಿಗೆ ಸೇರಿ ಅಂಗಡಿ ಎಂದು ತಿಳಿಯುತ್ತದೆ. ಈ ರೀತಿಯಾಗಿ ಇತ್ತೀಚಿಗೆ ಹಿಂದೂಗಳನ್ನು ಯಾಮಾರಿಸುವ ಕೆಲಸ ನಡೆಯುತ್ತದೆ ಈ ಬಗ್ಗೆ ಹಿಂದೂ ಸಂಘಟನೆ ರಸ್ತೆ ಇಳಿದು ಕೆಲಸ ಮಾಡುವ ಜೊತೆಗೆ ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತೆ. ಜೊತೆಗೆ ಹಿಂದೂ ಭಾಂಧವರು ಎಚ್ಚೇತ್ತುಕೊಂಡು ದೀಪಾವಳಿ ಹಬ್ಬದ ಸಮಯದಲ್ಲಿ ವ್ಯವಹಾರ ನಡೆಸುವಂತೆ ಹಿಂದೂ ಸಂಘಟನೆಗಳು ಸಲಹೆ ನೀಡಿದೆ.

Font Awesome Icons

Leave a Reply

Your email address will not be published. Required fields are marked *