ತಿರುಚಿರಾಪಲ್ಲಿ: ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೂ ಮುನ್ನ ಪ್ರಧಾನಿ ಮೋದಿ ಅವರು ಶನಿವಾರ ಶ್ರೀರಂಗಂನ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದರು.
ದೇವಾಲಯಕ್ಕೆ ಆಗಮಿಸಿದ ಪ್ರಧಾನಿಗೆ ಅಲ್ಲಿನ ಅರ್ಚಕರು ಪೂರ್ಣಕುಂಭ ಸ್ವಾಗತ ನೀಡಿದ್ದರು. ತಿರುಚ್ಚಿಗೆ ಭೇಟಿ ನೀಡಿದ ಪ್ರಧಾನಿ ಮೋದಿ ಅವರು ಶ್ರೀರಂಗಂ ದೇವಸ್ಥಾನದಲ್ಲಿ ಕಂಬ ರಾಮಾಯಣದ ಶ್ಲೋಕಗಳನ್ನು ಆಲಿಸಿದರು. ರಾಮಾಯಣದ ಅತ್ಯಂತ ಹಳೆಯ ಆವೃತ್ತಿಗಳಲ್ಲಿ, ಕಂಬ ರಾಮಾಯಣವನ್ನು ತಮಿಳು ಕವಿ ಕಂಬನ್ ರಚಿಸಿದ್ದಾರೆ.
ತಿರುಚಿರಾಪಳ್ಳಿಯಲ್ಲಿರುವ ಶ್ರೀ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿಯಾಗಿದ್ದಾರೆ ಮೋದಿ. ಈ ಭೇಟಿ ವೇಳೆ ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪ್ರಧಾನ ದೇವರ ಪರವಾಗಿ ಪ್ರಧಾನಿಗೆ ಉಡುಗೊರೆ, ಒಂದು ಸೆಟ್ ಸೀರೆಗಳು ಮತ್ತು ಇತರ ವಸ್ತುಗಳನ್ನು ನೀಡಲಾಗಿತ್ತು. ಅಯೋಧ್ಯೆಯಲ್ಲಿರುವ ರಾಮಮಂದಿರಕ್ಕೆ ಕೊಂಡೊಯ್ಯಲಿರುವ ವಿಶೇಷ ಉಡುಗೊರೆಯಾಗಿತ್ತು ಇದು.
ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಮೋದಿಯವರು ಈ ಉಡುಗೊರೆಯನ್ನು ರಾಮಲಲ್ಲಾನಿಗೆ ಸಮರ್ಪಿಸಿದ್ದಾರೆ.