ಸಂತ ಆಗ್ನೆಸ್ ಕಾಲೇಜಿನಲ್ಲಿ ‘ವೈಬ್ರಾಂಝಾ 2024’ ರಾಷ್ಟ್ರೀಯ ಅಂತರ್ಕಾಲೇಜು ಸ್ಪರ್ಧೋತ್ಸವ ‘ಆಗ್ನೋಫೆಸ್ಟ್’

ಮಂಗಳೂರು: ಸ್ಪರ್ಧೋತ್ಸವದ ಅಂಗವಾಗಿ 22-10-2024 ರ ಬೆಳಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ “ಸ್ಪರ್ಧೋತ್ಸವಗಳು ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಕಾರಿ. ನನ್ನ ಕಾಲೇಜು ದಿನಗಳಲ್ಲಿ ಇಂತಹ ಸ್ಪರ್ಧೋತ್ಸವಗಳು ನನಗೆ ಅತಿಮುಖ್ಯವೆನಿಸಿದ್ದವು. ಅವುಗಳಲ್ಲಿ ಭಾಗವಹಿಸುವುದು ನನಗೆ ಸವಾಲಿನ ವಿಷಯವಾಗಿದ್ದಂತೆ ಆಸಕ್ತಿಯ ವಿಷಯವೂ ಆಗಿತ್ತು. ನಮ್ಮ ಶಿಕ್ಷಣದ, ವೃತ್ತಿ ಬದುಕುಗಳಲ್ಲಿ ಎದುರಾಗುವ ಸವಾಲುಗಳು ನೂರಾರು. ಸವಾಲುಗಳನ್ನು, ನಮಗೆ ಎದುರಾಗುವ ಸೋಲನ್ನು ಗೆಲುವಿನ ಸೋಪಾನವಾಗಿ ನಾವು ಬದಲಾಯಿಸಬೇಕು.

ಅದಕ್ಕೆ ತಾಳ್ಮೆ, ಧ್ಯಾನ, ಪ್ರಾರ್ಥನೆ ಅತಿ ಮುಖ್ಯ. ನಮ್ಮಲ್ಲಿರುವ ಚಿಕ್ಕ ಚಿಕ್ಕ ಕೌಶಲ, ಪ್ರತಿಭೆ, ಶಕ್ತಿಗಳನ್ನು ನಾವು ಉಳಿಸಿ ಬೆಳೆಸಬೇಕು. ಮಾನವನ ಬಹಿರಂಗದಂತೆ ಅಂತರಂಗವಿರುವುದಿಲ್ಲ. ನಮ್ಮ ನಮ್ಮಲ್ಲಿರುವ ದೌರ್ಬಲ್ಯಗಳನ್ನು ತಿಳಿಯುವುದೇ ನಿಜವಾದ ಶಕ್ತಿ. ನಮ್ಮನ್ನು ತಿದ್ದಲು ನಾವು ಎಂದೂ ಬೇರೆಯವರನ್ನು ಅವಲಂಬಿಸಬಾರದು. ನಾವು ನಮ್ಮ ಬಗ್ಗೆ ನಂಬಿಕೆ ಇಡಬೇಕು. ನಮ್ಮಲ್ಲಿರುವ ಆತ್ಮವಿಶ್ವಾಸವನ್ನು ಎಂದೂ ಕಳಕೊಳ್ಳದೆ ಅದನ್ನು ಸಾಧ್ಯವಿದ್ದಷ್ಟು ಎತ್ತರಕ್ಕೆ ಬೆಳೆಸಬೇಕು.

್

ಸೃಜನಶೀಲತೆ, ಸಹೃದಯತನವನ್ನು ಉಳಿಸಿ ಬೆಳೆಸುವ ಸಾಧನೆಯನ್ನು ನಾವು ನಮ್ಮ ಬದುಕಿನಲ್ಲಿ ಮಾಡಬೇಕು” ಎಂದು ತನ್ನ ಬದುಕಿನ ಸಾಧನೆಯ ಅನುಭವಗಳನ್ನು ಸೋದಾಹರಣವಾಗಿ ತಿಳಿಸುತ್ತಾ ಪ್ರಸಿದ್ಧ ನಟಿ, ವಿಶೇಷ ಶಿಕ್ಷಣ ತಜ್ಞೆಯಾಗಿರುವ ಮಾಧುರಿ ಬ್ರಿಗಂಝಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಂತ ಆಗ್ನೆಸ್ ಕಾಲೇಜಿನಲ್ಲಿ ‘ವೈಬ್ರಾಂಝಾ 2024’ ರಾಷ್ಟ್ರೀಯ ಅಂತರ್ಕಾಲೇಜು ಸ್ಪರ್ಧೋತ್ಸವ ‘ಆಗ್ನೋಫೆಸ್ಟ್’ ನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲೆ ಡಾ|ಸಿ|ಎಂ.ವೆನಿಸ್ಸಾ ಎ.ಸಿ ಮಾತನಾಡುತ್ತ “ಅಂತರ್ಕಾಲೇಜು ಸ್ಪರ್ಧೋತ್ಸವದ ಅವಶ್ಯಕತೆಯನ್ನು ತಿಳಿಸಿದರು. ವಿದ್ಯೆ ತರಗತಿಯ ಕಲಿಕೆಗೆ, ಜ್ಞಾನಕ್ಕೆ ಸೀಮಿತವಾಗಿದ್ದರೆ, ಇಂತಹ ಸ್ಪರ್ಧೋತ್ಸವಗಳು ವಿದ್ಯಾರ್ಥಿಗಳನ್ನು ಮಾನಸಿಕವಾಗಿ, ದೈಹಿಕವಾಗಿ, ಸೃಜನಶೀಲಯುಕ್ತರನ್ನಾಗಿ ಮಾಡುತ್ತವೆ. ವಿದ್ಯಾರ್ಥಿಗಳು ಇಂತಹ ಅವಕಾಶಗಳನ್ನು ಹೆಚ್ಚು ಹೆಚ್ಚು ಉಪಯೋಗಿಸಿಕೊಳ್ಳಬೇಕು. ಅವಕಾಶಗಳು ನಮಗೆ ನಮ್ಮೊಳಗಿನ ಹೊಸತನವನ್ನು ತಿಳಿಸಿಕೊಡುತ್ತದೆ” ಎಂದು ಹೇಳಿದರು.

 ಗ

ಸಂಸ್ಥೆಯ ಸಹಾಯಕ ಕಾರ್ಯದರ್ಶಿ ಡಾ.ಸಿಸ್ಟರ್ ಮರಿಯ ರೂಪಾ ಎ.ಸಿ, ರಕ್ಷಕ ಶಿಕ್ಷಕ ಸಂಘದ ಶ್ರೀ ರವಿಭಟ್, ವಿದ್ಯಾರ್ಥಿ ನಾಯಕರುಗಳಾದ ಪ್ರಿವಿ ಡಿಸೋಜಾ ಮತ್ತು ಪ್ರತೀಕ್ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂತರ್ಕಾಲೇಜು ಸ್ಪರ್ಧೋತ್ಸವದ ಸಂಚಾಲಕಿ ಪ್ರೊ.ಸಬೀನಾ ಸ್ವಾಗತಿಸಿ, ಸಹಸಂಚಾಲಕಿ ಪ್ರೊ.ಹೆಲೆನ್ ಸೆರಾವೊ ವಂದಿಸಿದರು. ಪ್ರಥಮ ಬಿಸಿಎ ವಿದ್ಯಾರ್ಥಿ ಸ್ಟೀವ್ ರಿಚರ್ಡ್ ಮತ್ತು ಪ್ರಥಮ ಬಿಬಿಎ ವಿದ್ಯಾರ್ಥಿನಿ ರಕ್ಷಾ ಅಡಿಗ ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪ ಸಮಾರಂಭ: ನಿನ್ನೆ ಸಾಯಂಕಾಲ ‘ವೈಬ್ರಾಂಝಾ 2024’ ರಾಷ್ಟ್ರೀಯ ಅಂತರ್ಕಾಲೇಜು ಸ್ಪರ್ಧೋತ್ಸವ ಸಂತ ಆಗ್ನೆಸ್ ಕಾಲೇಜಿನಲ್ಲಿ ಸಮಾಪನಗೊಂಡಿತು. ಬಹುಭಾಷಾ ಕಲಾವಿದ, ಆಂಕರ್, ಧ್ವನಿ ಮಾಂತ್ರಿಕ, ಬಿಗ್ ಬಾಸ್ ಖ್ಯಾತಿಯ ಬಡೆಕ್ಕಿಲ ಪ್ರದೀಪ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸ್ಪರ್ಧೋತ್ಸವದ ಶೀರ್ಷಿಕೆ ‘ವೈಬ್ರಾಂಝಾ’ ಹಿನ್ನೆಲೆಯಲ್ಲಿ ಮಾತುಗಳನ್ನು ಆರಂಭಿಸಿ “ಪ್ರಕೃತಿಯಿಲ್ಲದೆ ನಾವಿಲ್ಲ, ಪ್ರಕೃತಿ ಇದ್ದರೆ ನಾವು, ನಮ್ಮ ಬದುಕು. ಪ್ರಕೃತಿಯನ್ನು, ಪರಿಸರವನ್ನು ಉಳಿಸಿ ಬೆಳೆಸೋಣ” ಎಂದು ಕರೆಯಿತ್ತರು.

ತಮ್ಮ ಮಾತುಗಳನ್ನು ಮುಂದುವರಿಸುತ್ತಾ ಪ್ರದೀಪ್ ಬಡೆಕ್ಕಿಲ ಅವರು “ವಿದ್ಯಾಭ್ಯಾಸ ವಿದ್ಯಾರ್ಥಿಗಳಿಗೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಇಂತಹ ಸ್ಪರ್ಧೋತ್ಸವ ಗಳಲ್ಲಿ ಭಾಗವಹಿಸುವುದು ಕೂಡಾ. ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಸ್ಪರ್ಧೆ ಇರಬೇಕು. ಸ್ಪರ್ಧೆಯಲ್ಲಿ ಸೋಲು, ಗೆಲುವು ಯಾವುದೂ ನಮ್ಮ ಕೈಯಲ್ಲಿಲ್ಲ. ನನ್ನ ಬದುಕಿನಲ್ಲೂ ಸ್ಪರ್ಧೆಯ ಸೋಲು ನನಗೆ ಬಹು ದೊಡ್ಡ ಪಾಠ ಕಲಿಸಿತ್ತು. ಅದರಿಂದ ನಾನು ಇನ್ನಷ್ಟು ಮತ್ತಷ್ಟು ಶಕ್ತಿಯುತವಾಗಿ ಬೆಳೆದೆ” ಎಂದು ಹೇಳುತ್ತಾ, ನಿರೂಪಣಾ ಕ್ಷೇತ್ರದಲ್ಲಿ ಮಾತು ಮತ್ತು ಧ್ವನಿಯಲ್ಲಿರಬೇಕಾದ ಶಕ್ತಿಯ ಬಗ್ಗೆ ಉದಾಹರಣೆಗಳನ್ವು ನೀಡುತ್ತಾ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಮಾತನಾಡಿದರು.

ಸಮಾರಂಭದಲ್ಲಿ ಕಾಲೇಜು ಪ್ರಾಂಶುಪಾಲೆ ಡಾ|ಸಿ|ಎಂ.ವೆನಿಸ್ಸಾ ಎ.ಸಿ, ಸಂಸ್ಥೆಯ ಸಹಾಯಕ ಕಾರ್ಯದರ್ಶಿ ಡಾ.ಸಿಸ್ಟರ್ ಮರಿಯ ರೂಪಾ ಎ.ಸಿ, ಸಂಸ್ಥೆಯ ಮ್ಯಾನೇಜರ್ ಸಿಸ್ಟರ್ ಕಾರ್ಮೆಲ್ ರೀಟಾ ಎಸಿ, ಉಪ ಪ್ರಾಂಶುಪಾಲೆ ಸಿಸ್ಟರ್ ರೂಪಾ,ಸ್ನಾತಕೋತ್ತರ ವಿಭಾಗದ ಕೋರ್ಡಿನೇಟರ್ ಸಿಸ್ಟರ್ ಡಾ. ವಿನೋರಾ ಎಸಿ, ವಿವಿಧ ನಿಕಾಯಗಳ ಡೀನ್ ಗಳು, ರಕ್ಷಕ ಶಿಕ್ಷಕ ಸಂಘದ ಪದಾಧಿಕಾರಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರುಗಳು, ವಿದ್ಯಾರ್ಥಿ ನಾಯಕರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿ ನಾಯಕ ಪ್ರತೀಕ್ ರೈ ಸ್ವಾಗತಿಸಿ, ಪದವಿ ವಿಭಾಗದ ವಿದ್ಯಾರ್ಥಿ ನಾಯಕಿ ಪ್ರಿವಿ ಡಿಸೋಜ ವಂದಿಸಿದರು. ದ್ವಿತೀಯ ಬಿಸಿಎ ವಿದ್ಯಾರ್ಥಿನಿ ಜೆಶೆಲ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಸಮಾರೋಪ ಸಮಾರಂಭದ ಕಾರ್ಯಕ್ರಮದ ಅಂಗವಾಗಿ ಕಾಲೇಜಿನ ವಿದ್ಯಾರ್ಥಿನಿಯರಿಂದ ಸ್ವಾಗತ ನೃತ್ಯ ನಡೆಯಿತು. ಸ್ಪರ್ಧೋತ್ಸವದ ಅಂಗವಾಗಿ ವಿದ್ಯಾರ್ಥಿ ವ್ಯಾಪಾರಿ, ಆಹಾರ ಮೇಳವೂ ಜರುಗಿತು.

ಅಂತರ್ಕಾಲೇಜು ಸ್ಪರ್ಧಾ ಮಹೋತ್ಸವದ ಅಂಗವಾಗಿ – ಪದವಿಪೂರ್ವ  ಮತ್ತು ಪದವಿ ತರಗತಿಗಳ ಒಟ್ಟು 23 ಕಾಲೇಜಿನ ತಂಡಗಳು ಭಾಗವಹಿಸಿದ್ದು, 12 ವಿಷಯಗಳಲ್ಲಿ ಸ್ಪರ್ಧೆಗಳು ನಡೆದಿದ್ದವು.

ಫಲಿತಾಂಶ:

ಪದವಿ ವಿಭಾಗ:
ಓವರ್ ಆಲ್ ಚಾಂಪಿಯನ್ ಶಿಪ್: ಸೈಂಟ್ ಅಲೋಶಿಯಸ್ ಪರಿಗಣಿತ ವಿವಿ ಮಂಗಳೂರು
ರನ್ನರ್ ಅಪ್: ರೋಶನಿ ನಿಲಯ, ಮಂಗಳೂರು

ಪದವಿಪೂರ್ವ ವಿಭಾಗ:
ಓವರ್ ಆಲ್ ಚಾಂಪಿಯನ್ ಶಿಪ್: ಸೈಂಟ್ ಆ್ಯಗ್ನೆಸ್ ಪದವಿಪೂರ್ವ ಕಾಲೇಜು, ಮಂಗಳೂರು
ರನ್ನರ್ ಅಪ್: ಸೈಂಟ್ಅಲೋಶಿಯಸ್ ಪದವಿಪೂರ್ವ ಕಾಲೇಜು, ಮಂಗಳೂರು

Font Awesome Icons

Leave a Reply

Your email address will not be published. Required fields are marked *