ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸಂಸತ್ ಕ್ಯಾಂಟೀನ್‌ಗೆ ಅನಿರೀಕ್ಷಿತವಾಗಿ ಭೇಟಿನೀಡಿ ಸಂಸದರೊಂದಿಗೆ ಊಟ ಮಾಡಿದ್ದಾರೆ.
ಮಧ್ಯಾಹ್ನ 2:30ರ ಸುಮಾರಿಗೆ ಸಂಸದರಿಗೆ ಪ್ರಧಾನಿಯನ್ನು ಭೇಟಿಯಾಗಬೇಕೆಂಬ ಕರೆ ಬಂದಿತ್ತು. ʼನಾನು ನಿಮ್ಮನ್ನು ಶಿಕ್ಷಿಸಲಿದ್ದೇನೆ, ನನ್ನೊಂದಿಗೆ ಬನ್ನಿʼ ಎಂದು ಹುಸಿಮುನಿಸಿನಲ್ಲಿ ಹೇಳಿದ ಮೋದಿ, ಸಂಸದರನ್ನು ಕ್ಯಾಂಟೀನ್‌ಗೆ ಕರೆದೊಯ್ದರು.
ಊಟದಲ್ಲಿ ಸಸ್ಯಾಹಾರಿ ಆಹಾರಗಳಾದ ಅಕ್ಕಿ, ದಾಲ್, ಖಿಚಡಿ, ತಿಲ್ ಕಾ ಲಡ್ಡೂ ನೀಡಲಾಯಿತು.
ಟಿಡಿಪಿಯ ರಾಮ್ ಮೋಹನ್ ನಾಯ್ಡು, ಬಿಎಸ್‌ಪಿಯ ರಿತೇಶ್ ಪಾಂಡೆ, ಬಿಜೆಪಿಯ ಲಡಾಖ್ ಸಂಸದ ಜಮ್ಯಾಂಗ್ ನಮ್ಗ್ಯಾಲ್, ಕೇಂದ್ರ ಸಚಿವ ಎಲ್ ಮುರುಗುನ್, ಬಿಜೆಡಿಯ ಸಸ್ಮಿತ್ ಪಾತ್ರ ಮತ್ತು ಬಿಜೆಪಿಯ ಮಹಾರಾಷ್ಟ್ರ ಸಂಸದೆ ಹೀನಾ ಗವಿತ್ ಈ ಔತಣದಲ್ಲಿ ಭಾಗಿಯಾಗಿದ್ದರು.
ಊಟ ಮಾಡುವಾಗ ಪಕ್ಷಾತೀತವಾಗಿ ಸಂಸದರು ಮೋದಿಯ ಜೀವನಶೈಲಿ, ಬೆಳಗ್ಗೆ ಏಳುವ ಸಮಯ, ವೇಳಾಪಟ್ಟಿಯನ್ನು ನಿರ್ವಹಿಸುವ ಬಗೆಯ ಕುರಿತು ಪ್ರಶ್ನೆಗಳನ್ನು ಕೇಳಿದರು.
ಈ ಸಂಭಾಷಣೆಯಲ್ಲಿ, ಖಿಚಡಿ ತಮ್ಮ ಇಷ್ಟದ ಆಹಾರ ಎಂದ ಮೋದಿ, ನಾನು ಯಾವಾಗಲೂ PM ಮೋಡ್‌ನಲ್ಲಿ ಇರುವುದಿಲ್ಲ ಎಂದರು.
ಚುನಾವಣೆಗಳ ನಂತರ ಪಾಕಿಸ್ತಾನದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಬಯಸುತ್ತಿರುವ ನವಾಜ್ ಷರೀಫ್, ತಮ್ಮ ವಿದೇಶಿ ಪ್ರವಾಸಗಳು, ಸ್ಟ್ಯಾಚ್ಯೂ ಆಫ್ ಯೂನಿಟಿಗಳಂತಹ ವಿಷಯದ ಬಗ್ಗೆ ಮಾತನಾಡಿದ ಮೋದಿ, ಅವರು 2018 ರಲ್ಲಿ ಶಂಕುಸ್ಥಾಪನೆ ಮಾಡಿದ ಅಬುಧಾಬಿ ದೇವಸ್ಥಾನದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.