ಸಕಲ ಸರ್ಕಾರಿ ಗೌರವಗಳೊಂದಿಗೆ ಶಾಸಕ ವೆಂಕಟಪ್ಪ ನಾಯಕ ಅಂತ್ಯಕ್ರಿಯೆ

ಯಾದಗಿರಿ: ಜಿಲ್ಲೆಯ ಸುರಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ರಾಜಾ ವೆಂಕಟಪ್ಪ ನಾಯಕ‌ ಅವರು ನಿನ್ನೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಯಾವಾಗ ತಮ್ಮ ನೆಚ್ಚಿನ ರಾಜಾ ವೆಂಕಟಪ್ಪ ಇಹಲೋಕ ತ್ಯಜಿಸಿದರು ಎನ್ನುವ ಸುದ್ದಿ ತಿಳಿಯಿತೋ ಇಡೀ ಸುರಪುರವೇ ಸ್ತಬ್ಧವಾಗಿತ್ತು.

ಇಂದು ಸುರಪುರ ಪಟ್ಟಣದ ಗೋಸಲ ರಾಜವಂಶದ ಸಂಪ್ರದಾಯದಂತೆ ರಾಜಮನೆತನದ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿದ್ದು, ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ಹಿರಿಯ ಪುತ್ರ ರಾಜಾ ವೇಣುಗೋಪಾಲ ನಾಯಕರಿಂದ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ. ಈ ವೇಳೆ ಕುಟುಂಬಸ್ಥರು, ಬಂಧು ಮಿತ್ರರು ಮತ್ತು ಸಾವಿರಾರು ಬೆಂಬಲಿಗರು ಉಪಸ್ಥಿತರಿದ್ದರು.

 

Font Awesome Icons

Leave a Reply

Your email address will not be published. Required fields are marked *