ಸಾರ್ವಜನಿಕರ ಸಲಹೆಗೆ ಅ.28ರ ತನಕ ಅವಧಿ ವಿಸ್ತರಣೆ – ನ್ಯೂಸ್ ಕರ್ನಾಟಕ ಕನ್ನಡ (News Karnataka Kannada)

ಬೆಂಗಳೂರು: ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ‘ನಮ್ಮ ಮೆಟ್ರೊ’ ಪ್ರಯಾಣ ದರ ಪರಿಷ್ಕರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಲಹೆ ಅಥವಾ ಸೂಚನೆ ಸ್ವೀಕರಿಸಲು ನೀಡಿದ್ದ ಅ.21ರ ವರೆಗಿನ ಅವಧಿಯನ್ನು ಅ.28ರವರೆಗೆ ಬಿಎಂಆರ್‌ಸಿಎಲ್ ವಿಸ್ತರಣೆ ಮಾಡಿದೆ.

ದರ ಪರಿಷ್ಕರಣೆಗಾಗಿ ದರ ನಿಗದಿ ಸಮಿತಿ ರಚನೆಯಾಗಿದ್ದು, ನಾಗರಿಕರು ಸಲಹೆಗಳನ್ನು ಅ.21 ರ ಒಳಗೆ [email protected] ಇ-ಮೇಲ್ ಮೂಲಕ ಸಲ್ಲಿಸಬಹುದು ಅಥವಾ ಅಧ್ಯಕ್ಷರು, ದರ ನಿಗದಿ ಸಮಿತಿ, ನಮ್ಮ ಮೆಟ್ರೊ, 3ನೇ ಮಹಡಿ, ‘ಸಿ’ ಬ್ಲಾಕ್, ಬಿಎಂಟಿಸಿ ಕಾಂಪ್ಲೆಕ್ಸ್, ಕೆಎಚ್ ರಸ್ತೆ, ಶಾಂತಿನಗರ, ಬೆಂಗಳೂರು -560027 ಇಲ್ಲಿಗೆ ಲಿಖಿತವಾಗಿ ಕಳುಹಿಸಬಹುದು ಅಥವಾ ವಾಟ್ಸಪ್ ಸಂಖ್ಯೆ : 9448291173 ಇದಕ್ಕೂ ಸಂದೇಶ ಕಳಿಸಬಹುದು ಎಂದು ಬಿಎಂಆರ್‌ಸಿಎಲ್ ತಿಳಿಸಿತ್ತು. ಇಲ್ಲಿವರೆಗೆ 2 ಸಾವಿರಕ್ಕೂ ಅಧಿಕ ಜನರು ಸಲಹೆಗಳನ್ನು ನೀಡಿದ್ದಾರೆ. ಸಾರ್ವಜನಿಕರಿಗೆ ಇನ್ನಷ್ಟು ಅವಕಾಶ ನೀಡಲು ಸಮಿತಿ ನಿರ್ಧರಿಸಿರುವುದರಿಂದ ಒಂದು ವಾರ ಅವಧಿ ವಿಸ್ತರಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳಿದ್ದಾರೆ.

ಮೆಟ್ರೊ ರೈಲ್ವೆ ಮತ್ತು (ಕಾರ್ಯಾಚರಣೆ ನಿರ್ವಹಣೆ) ಕಾಯ್ದೆ, 2002 ರ ಸೆಕ್ಷನ್ 33 ಮತ್ತು 34ರ ಅಡಿಯಲ್ಲಿ ಕೇಂದ್ರ ಸರ್ಕಾರ ಇದೇ ಪ್ರಥಮ ಬಾರಿಗೆ ಬಿಎಂಆರ್‌ಸಿಎಲ್ ನ ಮೊದಲ ದರ ಸಮಿತಿಯನ್ನು ರಚಿಸಿತ್ತು. ಸಂಘಸಂಸ್ಥೆಗಳು, ಪ್ರಯಾಣಿಕರು, ತಜ್ಞರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಸಮಿತಿಯು ದರ ನಿಗದಿಪಡಿಸಲಿದೆ. ಆನಂತರ ಬಿಎಂಆರ್‌ಸಿಎಲ್ ದರ ಪರಿಷ್ಕರಣೆಗೆ ರಾಜ್ಯ ಸರ್ಕಾರ ಅನುಮತಿ ಕೋರಿ ಪ್ರಸ್ತಾವನ್ನು ಸಲ್ಲಿಸುತ್ತದೆ. ರಾಜ್ಯ ಸರ್ಕಾರದ ಒಪ್ಪಿಗೆ ಸಿಕ್ಕಿದ ಮೇಲೆ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಎಲ್ಲ ಹಂತದಲ್ಲಿ ಅನುಮತಿ ಪಡೆದ ಬಳಿಕ ದರ ಹೆಚ್ಚಳವಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ನಮ್ಮ ಮೆಟ್ರೊ ಪ್ರಸ್ತುತ ನಗರದಾದ್ಯಂತ 73.81 ಕಿ.ಮೀ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪೂರ್ವ-ಪಶ್ಚಿಮ ಕಾರಿಡಾರ್ 43.49 ಕಿ.ಮೀ ಉದ್ದವಿದ್ದು, ಪೂರ್ವದಲ್ಲಿ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣದಿಂದ ಪ್ರಾರಂಭವಾಗಿ ಪಶ್ಚಿಮದಲ್ಲಿ ಚಲ್ಲಘಟ್ಟ ಟರ್ಮಿನಲ್‌ನಲ್ಲಿ ಕೊನೆಗೊಳ್ಳುತ್ತದೆ. ಕಿ.ಮೀ ಉದ್ದವಿದ್ದು, ಉತ್ತರದಲ್ಲಿ ನಾಗಸಂದ್ರದಲ್ಲಿ ಪ್ರಾರಂಭವಾಗಿ ದಕ್ಷಿಣದಲ್ಲಿ ಸಿಲ್ಕ್ ಇನ್‌ಸ್ಟಿಟ್ಯೂಟ್‌ ನಲ್ಲಿ ಕೊನೆಗೊಳ್ಳುತ್ತದೆ. ಈ ಎರಡು ಮಾರ್ಗಗಳಲ್ಲಿ ಪ್ರತಿನಿತ್ಯ 56 ರೈಲುಗಳು ಸಂಚರಿಸುತ್ತಿದ್ದು, ಸರಾಸರಿ 7 ಲಕ್ಷ ಜನ ಪ್ರಯಾಣಿಸುತ್ತಾರೆ.

Font Awesome Icons

Leave a Reply

Your email address will not be published. Required fields are marked *