ಬೆಂಗಳೂರು,ಆಗಸ್ಟ್, 31,2024 (www.justkannada.in): ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ದ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲರು ನೀಡಿರುವ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಯುತ್ತಿದ್ದು ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದಾರೆ.
ಹೈಕೋರ್ಟ್ ನ್ಯಾ. ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠದಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದ್ದು, ಈ ವೇಳೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವಾಗ ಸಂಪುಟ ಸಲಹೆಯನ್ನು ರಾಜ್ಯಪಾಲರು ಪರಿಗಣಿಸಿಲ್ಲ ಎಂಬ ವಾದಕ್ಕೆ ರಾಜ್ಯಪಾಲರ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿರುಗೇಟು ನೀಡಿದ್ದಾರೆ.
ರಾಜ್ಯಪಾಲರು ಸಂಪುಟ ಸಲಹೆ ಪರಿಗಣಿಸಬೇಕು ಎಂದಿಲ್ಲ. ಸಿಎಂ ವಿರುದ್ದ ತನಿಖೆಗೆ ನಿರ್ಧರಿಸುವಾಗ ಸಂಪುಟದ ಸಲಹೆ ಪರಿಗಣಿಸುವಂತಿಲ್ಲ.ಮುಖ್ಯಮಂತ್ರಿ ಆಯ್ಕೆ ಮಾಡುವ ಸಚಿವ ಸಿಎಂಗೆ ನಿಷ್ಠನಾಗಿರುತ್ತಾನೆ . ಸಿಎಂ ವಿರದ್ದವೇ ಆರೋಪವಿದ್ದಾಗ ಅವರ ಸಲಹೆ ಪರಿಗಣಿಸಬಾರದು ಹೀಗಾಗಿ ಸಂಪುಟ ಸೂಚನೆಯನ್ನ ಕಣ್ಣೆತ್ತಿಯೂ ನೋಡುವ ಅಗತ್ಯವಿಲ್ಲ . ಸಿಎಂ ಕ್ಯಾಬಿನೆಟ್ ಸಭೆಯಲ್ಲಿ ಭಾಗವಹಿಸಿಲ್ಲವಾಗಿರಬಹದು ಆದರೆ ಅವರು ನೇಮಿಸಿದ ವ್ಯಕ್ತಿಯೇ ಸಂಪುಟದ ನೇತೃತ್ವ ವಹಿಸಿರುತ್ತಾರೆ. ಹೀಗಾಗಿ ಅಂತಹ ಸಭೆಯ ನಿರ್ಣಯಕ್ಕೆ ಯಾವುದೇ ಮಹತ್ವವಿಲ್ಲ ಎಂದು ತುಷಾರ್ ಮೆಹ್ತಾ ವಾದಿಸಿದ್ದಾರೆ.
Key words: Cabinet, advice, CM, high court, Solicitor General, argument