ಸಿನಿಮಾಗಳಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎಂಬ ಎರಡು ವಿಧ -ಕಾಸರಗೋಡು ಚಿನ್ನಾ

ಸುರತ್ಕಲ್: “ಸಿನಿಮಾಗಳಲ್ಲಿ ಒಳ್ಳೆಯ ಮತ್ತು ಕೆಟ್ಟ ಸಿನಿಮಾ ಅನ್ನೋ ಎರಡು ವಿಧ ಬಿಟ್ಟರೆ ಆರ್ಟ್ ಮತ್ತು ಕಮರ್ಷಿಯಲ್ ಅನ್ನೋ ಪ್ರತ್ಯೇಕ ವಿಧ ಇಲ್ಲ. ‘ಕೊರಮ್ಮ’ ಸಿನಿಮಾ ಮೂಲಕ ಶಿವಧ್ವಜ್ ಅವರು ಒಂದೊಳ್ಳೆ ಸಿನಿಮಾ ಪ್ರೇಕ್ಷಕರಿಗೆ ನೀಡಿದ್ದಾರೆ. ಒಂದು ಪ್ರಶಸ್ತಿ ಪಡೆಯಲು ಸಿನಿಮಾಕ್ಕೆ ಏನೆಲ್ಲಾ ಬೇಕೋ ಅದೆಲ್ಲಾ ಪ್ರಯತ್ನವನ್ನು ಕೂಡ ಶಿವಧ್ವಜ್ ಮಾಡಿದ್ದಾರೆ. ಕ್ಲೈಮಾಕ್ಸ್ ಅನ್ನು ಅಧ್ಭುತವಾಗಿ ಕಟ್ಟಿಕೊಟ್ಟಿರುವ ಚಿತ್ರತಂಡ, ಕೊರಮ್ಮ ಪಾತ್ರಧಾರಿ ಮೋಹನ್ ಶೇಣಿ, ಕೊರಮ್ಮನ ಪತ್ನಿಯ ಪಾತ್ರ, ರೂಪಾ ವರ್ಕಾಡಿ, ಲಕ್ಷ್ಮಣ ಮಲ್ಲೂರು, ಗುರುಹೆಗ್ಡೆ ಅವರ ನಟನೆ ಎಲ್ಲವೂ ಮೆಚ್ಚುವಂತದ್ದು. ನಮ್ಮ ಮಣ್ಣಿನ ಸಿನಿಮಾ 25 ದಿನಗಳನ್ನು ಪೂರೈಸಿರುವುದು ಖುಷಿಯ ವಿಚಾರ. ಶಿವಧ್ವಜ್ ಶೋಕಿಗಾಗಿ ಬದುಕಿದವರಲ್ಲ ಬದಲಿಗೆ ಸಿನಿಮಾವನ್ನು ಉಸಿರಾಗಿಸಿಕೊಂಡವರು” ಎಂದು ಖ್ಯಾತ ರಂಗಕರ್ಮಿ ಕಾಸರಗೋಡು ಚಿನ್ನಾ ಹೇಳಿದರು.
ಅವರು ಸುರತ್ಕಲ್ ನ ಸಿನಿ ಗ್ಯಾಲಕ್ಸಿಯಲ್ಲಿ ಜರುಗಿದ “ಕೊರಮ್ಮ” ಸಿನಿಮಾ 25ನೇ ದಿನ ಪೂರೈಸಿದ ಸಂಭ್ರಮಾಚರಣೆಯಲ್ಲಿ ಮಾತಾಡುತ್ತಿದ್ದರು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ವೇದಿಕೆಯಲ್ಲಿ ಕಾಸರಗೋಡು ಚಿನ್ನಾ, ಚಿತ್ರ ನಿರ್ದೇಶಕ ಶಿವಧ್ವಜ್ ಶೆಟ್ಟಿ, ಜಯಕಿರಣ ಪತ್ರಿಕೆಯ ಮಾಲಕ ಪ್ರಕಾಶ್ ಪಾಂಡೇಶ್ವರ್, ಹಿರಿಯ ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಜಾದೂಗಾರ ಕುದ್ರೋಳಿ ಗಣೇಶ್, ಸುರತ್ಕಲ್ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಧಾಕರ್ ಎಸ್. ಪೂಂಜಾ, ಅಡ್ಯಾರ್ ಪುರುಷೋತ್ತಮ ಭಂಡಾರಿ, ನಟಿ ರೂಪಾ ವರ್ಕಾಡಿ, ಭೋಜರಾಜ್ ವಾಮಂಜೂರ್, ಯತೀಶ್ ಬೈಕಂಪಾಡಿ, ಮೋಹನ್ ಶೇಣಿ, ನಿರ್ಮಾಪಕ ಅಡ್ಯಾರ್ ಮಾಧವ ನಾಯ್ಕ್, ಗಿರೀಶ್ ಶೆಟ್ಟಿ ಕಟೀಲ್, ತಮ್ಮ ಲಕ್ಷ್ಮಣ, ಗೋಪಿನಾಥ ಭಟ್, ಸಂತೋಷ್ ಶೆಟ್ಟಿ, ಶಶಿರಾಜ್ ಕಾವೂರು, ನಿತ್ಯಾನಂದ ಪೈ ಕಾರ್ಕಳ, ಸಿನಿ ಗ್ಯಾಲಕ್ಸಿ ಮಾಲಕ ಶಶಿಧರ್, ದೀಪಕ್, ಮಧು ಸುರತ್ಕಲ್, ಬಾಲಕೃಷ್ಣ ಶೆಟ್ಟಿ ಪುತ್ತೂರು , ಸಿನಿಮಾದ ಕಲಾವಿದರು, ತಂತ್ರಜ್ಞರು ಮತ್ತಿತರರು ಉಪಸ್ಥಿತರಿದ್ದರು.

Font Awesome Icons

Leave a Reply

Your email address will not be published. Required fields are marked *