ಸುಗ್ಗಿ 11 ನೋಂದಣಿ ಆರಂಭ – ನ್ಯೂಸ್ ಕರ್ನಾಟಕ ಕನ್ನಡ (News Karnataka Kannada)

ದುಬೈ: ಉಚಿತ ಕನ್ನಡ ಕಲಿಕೆಗಾಗಿ ಅಕ್ಟೋಬರ್‌ 2 ರಿಂದ ಕನ್ನಡ ಪಾಠ ಶಾಲೆ ವೆಬ್‌ ಪೇಜ್‌ ನಲ್ಲಿ ನೊಂದಾಣಿ ಆರಂಭಗೊಂಡಿದೆ. ಕನ್ನಡ ಪಾಠ ಶಾಲೆ ದುಬೈ 2024 ರಿಂದ ಯು.ಎ.ಇ ಯ ಮಕ್ಕಳಿಗೆ ಕನ್ನಡ ಕಲಿಸುತ್ತಾ ಬಂದಿದ್ದು, ಪ್ರತೀ ವರುಷ 80 ಕ್ಕೂ ಹೆಚ್ಚು ಮಕ್ಕಳಿಗೆ ಕನ್ನಡ ಸಾಕ್ಷರತೆ ನೀಡುತ್ತಿದೆ.

ಉಚಿತ ಕನ್ನಡ ಭಾಷಾ ಕಲಿಕೆಯ 11 ನೇ ವರುಷದ ಸುಗ್ಗಿಗೆ ಮಧ್ಯಪ್ರಾಚ್ಯದ ಎಲ್ಲಾ ಎಲ್ಲಾ ರಾಷ್ಟ್ರದ ಕನ್ನಡಿಗರೂ ತಮ್ಮ ಮಕ್ಕಳನ್ನು ಕನ್ನಡ ಪಾಠಶಾಲೆ ದುಬೈಗೆ ನೊಂದಾಯಿಸಲು ವಿನಂತಿಸುತ್ತಿದ್ದಾರೆ.

ವಯೋಮಿತಿ 6 ವರುಷರಿಂದ 18 ವರುಷದ ವರೆಗಿನ ಮಕ್ಕಳಿಗೆ ಅವಕಾಶವಿದೆ. ನವೆಂಬರ್‌ 2024 ರಿಂದ ಏಪ್ರಿಲ್‌ 2025 ರವರೆಗೆ 6 ತಿಂಗಳ ಉಚಿತ ಶಾಲೆ ನಡೆಯಲಿದೆ. ಪ್ರತಿ ಶುಕ್ರವಾರ ಮತ್ತು ಶನಿವಾರ ಆನ್‌ ಲೈನ್‌ ಮುಖಾಂತರ ತರಗತಿಗಳು ನಡೆಯುತ್ತದೆ. ಹೆಚ್ಚಿನ ಮಾಹಿತಿಗಾಗಿ 971504229394 ಕರೆ ಮಾಡಿ

Font Awesome Icons

Leave a Reply

Your email address will not be published. Required fields are marked *