ಸೆ. 19ರಿಂದ ಚೆನ್ನೈನಲ್ಲಿ ಬಾಂಗ್ಲಾ ವಿರುದ್ಧ ಟೆಸ್ಟ್​ ಸರಣಿ ಪ್ರಾರಂಭ!

ಬಾಂಗ್ಲಾ ಎದುರಿನ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಪ್ರಕಟವಾಗಿದೆ. 16 ಸದಸ್ಯರ ತಂಡದಲ್ಲಿ ರೋಹಿತ್ ಶರ್ಮಾ ನಾಯಕರಾಗಿದ್ರೆ. ಆರಂಭಿಕನಾಗಿ ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್ ಕಾಣಿಸಿಕೊಂಡಿದ್ದಾರೆ.

ಮಿಡಲ್ ಆರ್ಡರ್​ ಬ್ಯಾಟರ್​ಗಳಾಗಿ ವಿರಾಟ್ ಕೊಹ್ಲಿ, ಸರ್ಫರಾಜ್ ಖಾನ್​ ಅವಕಾಶ ಗಿಟ್ಟಿಸಿದ್ರೆ. ವಿಕೆಟ್ ಕೀಪರ್​​ಗಳಾಗಿ ರಿಷಭ್ ಪಂತ್, ಧ್ರುವ್ ಜುರೇಲ್ ಸ್ಥಾನ ಪಡೆದಿದ್ದಾರೆ. ಆಲ್​ರೌಂಡರ್​​​ ಕೋಟಾದದಲ್ಲಿ ಆರ್​.ಅಶ್ವಿನ್, ಆರ್.ಜಡೇಜಾ, ಅಕ್ಷರ್ ಪಟೇಲ್ ಕಾಣಿಸಿಕೊಂಡರೆ, ಸ್ಪೆಷಲಿಸ್ಟ್​ ಸ್ಪಿನ್ನರ್ ಆಗಿ ಕುಲ್​ದೀಪ್ ಯಾದವ್ ಅವಕಾಶ ಪಡೆದಿದ್ದಾರೆ. ಇನ್ನು ವೇಗಿಗಳಾಗಿ ಜಸ್​ಪ್ರೀತ್​ ಬೂಮ್ರಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಜೊತೆ ಯಶ್​ ದಯಾಳ್ ಕಾಣಿಸಿಕೊಂಡಿದ್ದಾರೆ.

ಇಂಗ್ಲೆಂಡ್ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದ ಮಖೇಶ್, ದುಲೀಪ್ ಟ್ರೋಫಿಯಲ್ಲಿ ಇಂಪ್ರೆಸ್ಸಿಂಗ್ ಪರ್ಫಾಮೆನ್ಸ್​ ನೀಡುವಲ್ಲಿ ವಿಫಲರಾಗಿದ್ದಾರೆ. ಈ ಕಾರಣಕ್ಕೆ ಟೆಸ್ಟ್​ ತಂಡದಿಂದ ಕೊಕ್ ನೀಡಲಾಗಿದೆ. ಆದ್ರೆ, ಕನ್ನಡಿಗ ಪಡಿಕ್ಕಲ್, ಉತ್ತಮ ಪ್ರದರ್ಶನದ ಹೊರತಾಯೂ ತಂಡದಿಂದ ಗೇಟ್​ಪಾಸ್ ನೀಡಲಾಗಿದೆ.

ಬಾಂಗ್ಲಾ ವಿರುದ್ಧದ ಟೆಸ್ಟ್​ಗೆ ಟೀಮ್​ ಇಂಡಿಯಾ: ರೋಹಿತ್​ ಶರ್ಮಾ (ಕ್ಯಾಪ್ಟನ್​​), ಯಶಸ್ವಿ ಜೈಸ್ವಾಲ್​​, ಶುಭ್ಮನ್​ ಗಿಲ್​​, ವಿರಾಟ್​​ ಕೊಹ್ಲಿ, ಕೆ.ಎಲ್​ ರಾಹುಲ್​​, ಸರ್ಫರಾಜ್​ ಖಾನ್​​, ರಿಷಭ್​ ಪಂತ್​​, ಧೃವ್​ ಜುರೇಲ್​​, ಆರ್​. ಅಶ್ವಿನ್​, ರವೀಂದ್ರ ಜಡೇಜಾ, ಅಕ್ಷರ್​​ ಪಟೇಲ್​​, ಕುಲ್ದೀಪ್​ ಯಾದವ್​​, ಮೊಹಮ್ಮದ್​ ಸಿರಾಜ್​​, ಆಕಾಶ್​ ದೀಪ್​​, ಜಸ್​ಪ್ರೀತ್​ ಬುಮ್ರಾ, ಯಶ್​ ದಯಾಳ್​​.

Font Awesome Icons

Leave a Reply

Your email address will not be published. Required fields are marked *