ಸೆ.30 ರಂದು ಮೈಸೂರಿನ ಸಿಎಂ ನಿವಾಸದ ಬಳಿ ಧರಣಿ ಸತ್ಯಾಗ್ರಹಕ್ಕೆ ರೈತ ಮುಖಂಡರು ನಿರ್ಧಾರ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್


ಮೈಸೂರು,ಸೆಪ್ಟಂಬರ್,19,2024 (www.justkannada.in):  ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸೆಪ್ಟಂಬರ್ 30 ರಂದು  ಮೈಸೂರಿನ ಸಿಎಂ ಸಿದ್ದರಾಮಯ್ಯ ನಿವಾಸದ ಬಳಿ ಧರಣಿ ಸತ್ಯಾಗ್ರಹ ಮಾಡಲು ರೈತ ಮುಖಂಡರು ನಿರ್ಧರಿಸಿದ್ದಾರೆ.

ನಗರದ ಗನ್ ಹೌಸ್ ಬಳಿ ಇರುವ ಕುವೆಂಪು ಉದ್ಯಾನವನದಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಸಭೆ ನಡೆಯಿತು.  ಸಭೆಗು ಮುನ್ನ ರೈತರು  ವಿವಿಧ ಬೇಡಿಕೆಗಳ ಆಗ್ರಹಿಸಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬಿನ ಬೆಲೆ ಏರಿಕೆ, ಅಕ್ರಮ ಸಕ್ರಮ ವಿದ್ಯುತ್ ಸಂಪರ್ಕ  ಮರುಜಾರಿ, ಹಾಲಿನ ದರ ಪರಿಷ್ಕರಣೆ, ಕೃಷಿ ಬೆಳೆಗಳಿಗೆ  ಬೆಂಬಲ ಬೆಲೆ, ಕಾಡು ಪ್ರಾಣಿಗಳಿಂದ ಬೆಳೆ ಹಾನಿ, ಮಾನವ ಕಾಡುಪ್ರಾಣಿ ಸಂಘರ್ಷ ಸೇರಿದಂತೆ ಹಲವು ಬೇಡಿಕೆಗಳ ಆಗ್ರಹಿಸಿ ಹಲವಾರು ದಿನಗಳಿಂದ ಧರಣಿ, ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ತಲೆಗೂ ಹಾಕಿಕೊಳ್ಳುತ್ತಿಲ್ಲ, ಹಾಗಾಗಿ ಸೆ.30 ರಂದು ಮೈಸೂರಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾದ ಬಳಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ.

ಸಿಎಂ ಸಿದ್ದರಾಮಯ್ಯ ಅವರು ಬಂದ ಕಡೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುತ್ತದೆ. ನಮ್ಮ ಸಮಸ್ಯೆಗಳಿಗೆ ಕೂಡಲೇ ಸರ್ಕಾರ ಸ್ಪಂದಿಸಬೇಕು ಎಂದು ರೈತ ಮುಖಂಡರು ಅಗ್ರಹಿಸಿದರು. ಜಿಲ್ಲಾಡಳಿತ ಈ ಕೂಡಲೇ ಸರ್ಕಾರಕ್ಕೆ ನಮ್ಮ ಬೇಡಿಕೆ ಮುಟ್ಟಿಸಬೇಕು ಎಂದು ರೈತರು ಆಗ್ರಹಿಸಿದರು.

ಸಭೆಯಲ್ಲಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜು, ಗೌರವ ಅಧ್ಯಕ್ಷ ಗೌಡ್ರು ಸಿದ್ದಲಿಂಗಪ್ಪ ಹಾಡ್ಯ ರವಿ, ಕೆರೆಹುಂಡಿ ರಾಜಣ್ಣ ಸೇರಿದಂತೆ ಹಲವು ರೈತರು ಭಾಗಿಯಾಗಿದ್ದರು.

Key words: Farmer leader, protest, Mysore , September 30

Font Awesome Icons

Leave a Reply

Your email address will not be published. Required fields are marked *