ಸೈಬರ್ ಕ್ರೈಂಗೆ ವಿದ್ಯಾವಂತ ಜನರೇ ಹೆಚ್ಚು ಗುರಿ: ರಾಮ್‌ ಜವಾಹರ್

ಮೈಸೂರು: ಸೈಬರ್ ಕ್ರೈಂ ಪ್ರಸ್ತುತ ಟ್ರೇಡಿಂಗ್‌ನಲ್ಲಿ ಇರುವ ವಿಚಾರ ಇದರಲ್ಲಿ ವಿದ್ಯಾವಂತ ಜನರೇ ಹೆಚ್ಚು ಗುರಿಯಾಗುತ್ತಿದ್ದಾರೆ ಎಂದು ಚೆನ್ನೈನ ಭಾರತೀಯ ಪೇಟೆಂಟ್ ಕಚೇರಿ ಹಾಗೂ ವಿನ್ಯಾಸಗಳ ಉಪ ನಿಯಂತ್ರಕ ಎಂ.ರಾಮ್‌ ಜವಾಹರ್ ಹೇಳಿದರು.

ನಗರದ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಸೈಬರ್ ಭದ್ರತೆ ಹಾಗೂ ಬೌದ್ಧಿಕ ಹಕ್ಕುಗಳ ಒಳನೋಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇತರೆ ದೇಶಕ್ಕೆ ಹೋಲಿಕೆ ಮಾಡಿದರೆ ಭಾರತದಲ್ಲಿ ಹೂಡಿಕೆ ಪ್ರಮಾಣ ಕಡಿಮೆ. ಭಾರತ ಆರ್ಥಿಕವಾಗಿ ಮತ್ತು ಜಿಡಿಪಿ ಬೆಳವಣಿಗೆಯಲ್ಲಿ ಉತ್ತಮವಾಗಿದೆ.

ಸೈಬರ್ ಕ್ರೈಂನಿಂದ ಕಳವಿನ ಪ್ರಕರಣಗಳು ಪ್ರಚಲಿತವಾಗಿ ನಡೆಯುತ್ತಿವೆ. ಯಾವುದೇ ಮಾಹಿತಿಯನ್ನು ಗೌಪ್ಯವಾಗಿಡಬೇಡಿ. ಪೇಟೆಂಟ್ ಭಯೋತ್ಪಾದಕರ ಸಂಖ್ಯೆ ಜಾಸ್ತಿಯಾಗಿದೆ. ಇವರು ಗನ್‌ನಲ್ಲಿ ಶೂಟ್ ಮಾಡುವುದಿಲ್ಲ. ಹಾಗೆಯೇ ಮಾಹಿತಿಗಳನ್ನು ಕದಿಯುತ್ತಾರೆ ಎಂದರು

ಜೆಎಸ್‌ಎಸ್ ಮಹಾವಿದ್ಯಾಪೀಠದ ನಿರ್ದೇಶಕ ಸುರೇಶ್ ಮಾತನಾಡಿ, ನಾವು ಡಿಜಿಟಲ್ ಯುಗದಲ್ಲಿದ್ದೆವೆ. ಸೈಬರ್ ಭದ್ರತೆ ಬಹಳ ಮುಖ್ಯವಾಗಿದೆ. ತರಕಾರಿ ಮಾರುವವರು ಡಿಜಿಟಲ್ ತಂತ್ರಜ್ಞಾನ ಬಳಸುತ್ತಿದ್ದಾರೆ. ಅದರೆ, ಮಾಹಿತಿ ಕೊರತೆ ಕಡಿಮೆ. ಐಟಿ ಹಿನ್ನೆಲೆಯಲ್ಲಿ ಇದರ ಸಮಸ್ಯೆ ತಿಳಿದಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿದ್ಯಾವಂತರು ಹಾಗೂ ಸೆಲಬ್ರಿಟಿಗಳೆ ಹೆಚ್ಚು ಮೋಸಹೋಗುತ್ತಿದ್ದಾರೆ ಹಾಗೂ ಹಣ ಕಳೆದುಕೊಳ್ಳುತ್ತಿದ್ದಾರೆ. ಸಾಮಾನ್ಯ ಜನಗಳು ಹಣವನ್ನು ರಕ್ಷಿಸುತ್ತಾರೆ ಹಣವಂತರೆ ಗುರಿಯಾಗುತ್ತಿದ್ದಾರೆ. ಆದ್ದರಿಂದ ಸೈಬರ್ ಭದ್ರತೆ ಅತ್ಯಗತ್ಯ. ಅದು ಸುರಕ್ಷವಾಗಿದೆಯೇ ಎಂದು ತಿಳಿದುಕೊಳ್ಳಬೇಕು. ಮೈಕ್ರೋಸಾಫ್ಟ್ ಹ್ಯಾಕ್ ಮಾಡಿದ ಹದಿನಾರು ವರ್ಷದ ವ್ಯಕ್ತಿಗೆ ಜಾಬ್ ಕೊಟ್ಟಿದ್ದಾರೆ. ಡೇಟಾಗಳಿಗೆ ಸುರಕ್ಷತೆ ಆಗತ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಲಸಚಿವ ಡಾ.ಎಸ್.ಎ.ಧನರಾಜ್, ಬೆಂಗಳೂರಿನ ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ಎಟಿಇ ಕಾಲೇಜು ಪ್ರಾಂಶುಪಾಲ ಡಾ.ಭೀಮ್‌ಸೇನ್ ಸೋರಾಗಾಂವ್, ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಕುಲಪತಿ ಡಾ.ಎ.ಎನ್.ಸಂತೋಷ್ ಕುಮಾರ್, ಡಾ.ಸಿ.ನಟರಾಜ್, ಡಾ.ಎಸ್.ಎಧನರಾಜ್ ಇದ್ದರು.

 

Font Awesome Icons

Leave a Reply

Your email address will not be published. Required fields are marked *