ಸೌದಿ ಅರೇಬಿಯ: ದಮಾಮ್ ನಲ್ಲಿ ಫೆ. 8ರಂದು 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ನಡೆಯಲಿದೆ.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಶಿವರಾಜ್ ತಂಗಡಗಿ, ಕರ್ನಾಟಕ ವಿಧಾನಸಭೆ ಸಭಾಪತಿ ಜನಾಬ್ ಯುಟಿ ಖಾದರ್, ಕರ್ನಾಟಕ ರಾಜ್ಯದ ಗೃಹ ಸಚಿವರು ಜಿ ಪರಮೇಶ್ವರ್, ಸೌದಿ ಅರೇಬಿಯಾ ರಿಯಾದ್ ಭಾರತೀಯ ರಾಯಭಾರಿ ಡಾ. ಸುಹೇಲ್ ಅಜಾಜ್ ಖಾನ್, ಪೌರಾಡಳಿತ ಮತ್ತು ಹಚ್ ಖಾತೆ ಸಚಿವರು ಜನಾಬ್ ರಹೀಮ್ ಖಾನ್, ಆಹಾರ ಮತ್ತು ನಾಗರಿಕ ಸರಬರಾಜು, ಕರ್ನಾಟಕ ರಾಜ್ಯದ ಗ್ರಾಹಕ ವ್ಯವಹಾರಗಳ ಸಚಿವರು ಕೆಎಚ್ ಮುನಿಯಪ್ಪ, ಆರೋಗ್ಯ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್, ಸಹಕಾರ ಖಾತೆ ಸಚಿವರು ಕೆ ಎನ್ ರಾಜಣ್ಣ, ಅನಿವಾಸಿ ಕನ್ನಡಿಗರ ಕೋಶ ಉಪಾಧ್ಯಕ್ಷರು ಡಾ. ಆರತಿ ಕೃಷ್ಣ, ವಿಧಾನ ಪರಿಷತ್ ಸದಸ್ಯರು ಜನಾಬ್ ಬಿ. ಎಂ ಫಾರೂಕ್, ಕೋಶಾಧಿಕಾರಿ ಶ್ರೀ ಗೋಕರ್ಣನಾಥ ದೇವಸ್ಥಾನ ಕುದ್ರೊಳ್ಳಿ ನ್ಯಾಯವಾದಿ ಮತ್ತು ನೋಟರಿ ಅಧ್ಯಕ್ಷರು ಗುರು ಬೆಳದಿಂಗಳು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕೆಪಿಸಿಸಿ ಪದ್ಮರಾಜ್ ಆರ್, ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿಕಟ ಪೂರ್ವ ಅಧ್ಯಕ್ಷರು ಎಸ್ ಜಿ ಸಿದ್ದರಾಮಯ್ಯ, ದೈಜಿವರ್ಲ್ಡ್ ಗ್ರೂಪ್ ಆಫ್ ಮೀಡಿಯಾ ಸ್ಥಾಪಕರು ವಾಲ್ಟರ್ ಡಿಸೋಜಾ ನಂದಳಿಕೆ, ಅಲ್ ಮುಝೈನ್ ಗ್ರೂಪ್ ಜನಾಬ್ ಝಕರಿಯಾ ಬಜ್ಪೆ, ಎಕ್ಸ್ಪರ್ಟೈಸ್ ಗ್ರೂಪ್ ಜನಾಬ್ ಶೇಖ್ ಕರ್ನಿರೆ, ಆಲ್ ರಕ್ವಾನಿ ಗ್ರೂಪ್ ಜನಾಬ್ ಇಬ್ರಾಹಿಂ ಹುಸೇನ್, ಮಿಗ್ ಅರೇಬಿಯಾ ಜನರಲ್ ಮ್ಯಾನೇಜರ್ ಜನಾಬ್ ಅಬ್ದುಲ್ ನಿಶಾನ್, ಸೌದಿ ಅರೇಬಿಯಾ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರು ಸತೀಶ್ ಕುಮಾರ್ ಬಜಾಲ್, ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ 2004 ಸ್ಥಾಪಕ ಅಧ್ಯಕ್ಷರು ಇಂ. ಕೆ.ಪಿ ಮಂಜುನಾಥ್ ಸಾಗರ್ ಮಂಗಳೂರು ಹಾಗೂ ಸೌದಿ ಅರೇಬಿಯಾ 17ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಜನಾಬ್ ರಫೀಕ್ ಸೂರಿಂಜಿ ಭಾಗಿಯಾಗಲಿದ್ದಾರೆ.
ಪ್ರಪ್ರಥಮ ಬಾರಿಗೆ ಸೌದಿ ಅರೇಬಿಯಾದಲ್ಲಿ ಕರುನಾಡ ಕಲೆ ಮತ್ತು ಸಂಸ್ಕೃತಿಗಳ ಭವ್ಯ ಅನಾವರಣ ಆಗಲಿದ್ದು, ಈ ಕಾರ್ಯಕ್ರಮದಲ್ಲಿ ಕರ್ನಾಟಕ ಹಾಗೂ ಗರ್ಲ್ಸ್ ನ ಇತರೆ ರಾಷ್ಟ್ರಗಳಿಂದ ಸುಮಾರು ನೂರು ಖ್ಯಾತ ಕಲಾವಿದರು ಆಗಮಿಸಲಿದ್ದಾರೆ.
ಈ ವೇಳೆ ಪ್ರಸಿದ್ಧ ಕಲಾವಿದರಿಂದ ಮ್ಯಾಜಿಕ್ ಮತ್ತು ಸ್ಟ್ಯಾಂಡ್ ಅಪ್ ಕಾಮಿಡಿ, ಖ್ಯಾತ ಕಲಾವಿದರಿಂದ ಕಥಕ್ ಹಾಗೂ ಕನ್ನಡ ಗೀತೆಗಳು, ರಂಗ ಸಂಸ್ಕೃತಿ ಬೆಂಗಳೂರು ತಂಡದಿಂದ ನಗೆ ನಾಟಕ, ಬ್ಯಾರಿ ಸಾಂಪ್ರದಾಯಿಕ ದಫ್ ನೃತ್ಯ, ಶಾಸ್ತ್ರೀಯ ನೃತ್ಯ ಭರತನಾಟ್ಯ, ಬಹರೈನ್ ಬಿಲ್ಲವಾಸ್ ತಂಡದಿಂದ ಕರಾವಳಿಯ ಜನಪ್ರಿಯ ಹುಲಿ ವೇಷ ಕುಣಿತ ಹಾಗೂ ತುಳುನಾಡಿನ ಪ್ರಸಿದ್ಧ ಹಾಸ್ಯ ದಿಗ್ಗಜರಿಂದ ಹಾಸ್ಯ ಪ್ರಹಸನ ನಡೆಯಲಿದೆ.