ಸ್ಟಾರ್‌ ಕ್ರಿಕೆಟಿಗನೊಂದಿಗೆ ಕರಾವಳಿಯ ಖ್ಯಾತ ನಟಿ ಮದುವೆ ?

ಮುಂಬೈ: ಕರಾವಳಿ ಮೂಲದ ನಟಿ ಪೂಜಾ ಹೆಗ್ಡೆ ಖ್ಯಾತ ಕ್ರಿಕೆಟಿಗನ ಜೊತೆ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ  ಹರಿದಾಡುತ್ತಿದೆ. ಮುಂಬೈ ಮೂಲದ ಸ್ಟಾರ್‌ ಕ್ರಿಕೆಟಿಗನ ಜೊತೆ ಪೂಜಾ ಹೆಗ್ಡೆಗೆ ಲವ್‌ ಅಫೇರ್‌ ಇದೆ ಎಂದು ಸುದ್ದಿಯಾಗಿದೆ. ಈ ವಿಚಾರವಾಗಿ ಬಿ ಟೌನ್‌ನಲ್ಲೂ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ.

ಇತ್ತೀಚಿಗೆ ನಡೆದ ಸಮಾರಂಭವೊಂದರಲ್ಲಿ ಪೂಜಾ ಹೆಗ್ಡೆ ತನ್ನ ಬಾಯ್ ಫ್ರೆಂಡ್ ಜೊತೆ ಕಾಣಿಸಿಕೊಂಡಿದ್ದರು. ಇದು ಇದ್ದಕ್ಕಿದ್ದಂತೆ ಆಕೆಯ ಮದುವೆಯ ವಿಷಯವನ್ನು ಹಾಟ್ ಟಾಪಿಕ್ ಮಾಡಿದೆ. ಆದರೆ ಆ ಕ್ರಿಕೆಟಿಗ ಯಾರು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಹಾಗಂತ ಪೂಜಾ ಹೆಗ್ಡೆ ಡೇಟಿಂಗ್‌ ಸುದ್ದಿ ವೈರಲ್‌ ಆಗಿರುವುದು ಇದು ಮೊದಲೇನಲ್ಲ. ಸಲ್ಮಾನ್‌ ಖಾನ್‌ ಜೊತೆ ಕಿಸೀ ಕಾ ಭಾಯ್‌, ಕಿಸೀ ಕಾ ಜಾನ್‌ ಚಿತ್ರೀಕರಣದ ಸಮಯದಲ್ಲಿ ಪೂಜಾ ಹೆಗ್ಡೆ ಹಾಗೂ ಸಲ್ಮಾನ್‌ ಖಾನ್‌ ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು.

Font Awesome Icons

Leave a Reply

Your email address will not be published. Required fields are marked *