ಬೆಂಗಳೂರು, ಜೂನ್ 27,2024 (www.justkannada.in): ಡಿಕೆ ಶಿವಕುಮಾರ್ ಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂಬ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಚಂದ್ರಶೇಖರಶ್ರೀ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ವಿಧಾನಸಭೆ ವಿಪಕ್ಷ ನಾಯಕ ಆರ್,ಅಶೋಕ್, ಸ್ವಾಮೀಜಿಗಳೇ ಸ್ವಪ್ರೇರಣೆಯಿಂದ ಹೇಳಿದ್ರೋ ಅಥವಾ ಡಿಕೆಶಿ ಹೇಳಿಸಿದ್ರೋ ಗೊತ್ತಿಲ್ಲ ಎಂದು ಟೀಕಿಸಿದರು.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಸ್ವಾಮೀಜಿಗಳೇ ಸ್ವಪ್ರೇರಣೆಯಿಂದ ಹೇಳಿದರೋ ಅಥವಾ ಡಿಕೆ ಶಿವಕುಮಾರ್ ಹೇಳಿಸಿದರೋ ಗೊತ್ತಿಲ್ಲ. ಸಿದ್ದರಾಮಯ್ಯ ಅವರಿಗೆ ರಾಜಕೀಯದ ಒಳಗೆ ಹೋಗಿ ತಿಳಿದುಕೊಳ್ಳುವ ಸಾಮರ್ಥ್ಯ ಇದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಈ ರೀತಿ ಎಂದು ಆಗಿರಲಿಲ್ಲ. ಮೊದಲ ಬಾರಿಗೆ ಸಿಎಂ ಎದುರಿಗೆ ನೀವು ರಾಜೀನಾಮೆ ನೀಡಿ ಎಂದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಧರ್ಮಾರ್ಥನಾದರೆ ರಾಜೀನಾಮೆ ನೀಡಿ. ಇಷ್ಟು ಅವಮಾನ ಆಗಿಯೂ ಸಿಎಂ ಆಗಿ ಮುಂದುವರಿಯಬಾರದು ಎಂದು ವಾಗ್ದಾಳಿ ನಡೆಸಿದರು.
ಡಿಕೆ ಶಿವಕುಮಾರ್ ಗೆ ಅವರ ತಮ್ಮನ ಸೋಲನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದು ಸಿದ್ದರಾಮಯ್ಯ ತಂತ್ರಕ್ಕೆ ಇದೊಂದು ಪ್ರತಿತಂತ್ರ ಅಷ್ಟೇ. ಮೂರು ಡಿಸಿಎಂಗಳಿಗೆ ಹಿನ್ನೆಲೆ ಗಾಯಕರೇ ಸಿದ್ದರಾಮಯ್ಯ ಎಂದು ಆರ್.ಅಶೋಕ್ ಹೇಳಿದರು.
Key words: Swamiji –DK Shivakumar-CM-Position-R.Ashok