ಹಳೆಯ ಸಿದ್ದರಾಮಯ್ಯ ಈಗ ಕಳೆದು ಹೋಗಿದ್ದಾರೆ- ಕೇಂದ್ರ ಸಚಿವ ವಿ.ಸೋಮಣ್ಣ » Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್





ಮಂಗಳೂರು,ಜುಲೈ,17,2024 (www.justkannada.in):  ‘ಹಳೆ ಸಿದ್ದರಾಮಯ್ಯ ಈಗ ಇಲ್ಲ.  ಕಳೆದುಹೋಗಿದ್ದಾರೆ’ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಲೇವಡಿ ಮಾಡಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ, ಮುಡಾ ಹಗರಣದ ಕುರಿತು ಮಾತನಾಡಿದ ಕೇಂದ್ರ ಸಚಿವ ವಿ.ಸೋಮಣ್ಣ, ಸಿಎಂ ಸಿದ್ದರಾಮಯ್ಯ ಕಳೆದು ಹೋಗಿದ್ದಾರೆ. ಹಳೇ ಸಿದ್ದರಾಮಯ್ಯ ಹೀಗಿರಲಿಲ್ಲ ‘ನಾನು‌ ಸಿದ್ದರಾಮಯ್ಯ ಅವರ ಜೊತೆ ಮಂತ್ರಿಯಾಗಿ, ಶಾಸಕನಾಗಿ ಕೆಲಸ ಮಾಡಿದ್ದೇನೆ. ಇವತ್ತು ಇರುವ ಸಿದ್ದರಾಮಯ್ಯನವರ ವರ್ತನೆ ನೋಡಿ ನನಗೂ ಒಂದು ರೀತಿ ಅನುಮಾನ ಮೂಡಿದೆ  ಎಂದು ಟೀಕಿಸಿದರು.

‘ವಾಸ್ತವವನ್ನು ಯಾರೂ ಮುಚ್ಚಿಡಲು ಆಗಲ್ಲ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಗೊತ್ತಾಗಲ್ಲ ಎಂದು ಯಾರೂ ತಿಳಿದುಕೊಳ್ಳಬಾರದ. ‘ಸಿದ್ದರಾಮಯ್ಯ ತಪ್ಪು ತಿದ್ದಿಕೊಂಡು ಜನರಿಗೆ ವಾಸ್ತವಾಂಶ ಏನೆಂದು ತಿಳಿಸಬೇಕು. ಆಗ ಅವರು ಹಳೆ ಸಿದ್ದರಾಮಯ್ಯ ಆಗುತ್ತಾರೆ ಎಂದರು.

Key words: old, Siddaramaiah, Union Minister, V. Somanna






Previous articleಪಂಚೆ ಧರಿಸಿ ಬಂದಿದ್ದ ರೈತನಿಗೆ ಮಾಲ್ ನಲ್ಲಿ ಅಪಮಾನ


Font Awesome Icons

Leave a Reply

Your email address will not be published. Required fields are marked *