ಹಾವೇರಿ: ಹಾನಗಲ್ನ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಹೌದು. . ಸಂತ್ರಸ್ಥ ಮಹಿಳೆ ನನ್ನ ಮೇಲೆ ಗ್ಯಾಂಗ್ ರೇಪ್ ಆಗಿದೆ ಎಂದು ಆರೋಪ ಮಾಡಿರುವ ವಿಡಿಯೋ ವೈರಲ್ ಆಗಿತ್ತು. ಇದೀಗ ವೈರಲ್ ಆದ ವಿಡಿಯೋ ಬೆನ್ನಲ್ಲೇ ಹಾವೇರಿ ಜಿಲ್ಲೆಯ ಎಸ್ಪಿ ಅಂಶು ಕುಮಾರ್ ಹೇಳಿಕೆ ನೀಡಿದ್ದಾರೆ. ಕಳೆದ ದಿನ ಸಂತ್ರಸ್ತೆಯ 161 ಸ್ಟೇಟಮೆಂಟ್ ನಲ್ಲಿ ಯಾವುದೇ ಗ್ಯಾಂಗ್ ರೇಪ್ ಆಗಿಲ್ಲ ಎಂದು ಹೇಳಿದ್ದಾರೆ ಅಂತಾ ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಎಸ್ಪಿ ಅಂಶು ಕುಮಾರ್, ರಿಟರ್ನ್ ಸ್ಟೇಟ್ಮೆಂಟ್ ಕೂಡಾ ಮಾಡಿದ್ದೀವಿ. ಮೆಡಿಕಲ್ ಟೆಸ್ಟ್ ಮಾಡಲಾಗಿದೆ. ನಿನ್ನೆವರೆಗೂ ರೇಪ್ ಆಗಿದೆ ಎಂದು ಆರೋಪ ಮಾಡಿಲ್ಲ, ಹೇಳಿಕೆಯಲ್ಲಿ ಬಂದಿಲ್ಲ. ಮ್ಯಾಜಿಸ್ಟ್ರೇಟ್ ಮುಂದೆ ಇಂದು 164 ಸ್ಟೇಟ್ಮೆಂಟ್ ಕೂಡಾ ಮಾಡಲಾಗುತ್ತೆ. ಮ್ಯಾಜಿಸ್ಟ್ರೇಟ್ ಮುಂದೆ ಏನು ಹೇಳ್ತಾರೆ ಅದರ ಮೇಲೆ ತನಿಖೆ ಮಾಡಲಾಗುತ್ತೆ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿರುವ ಅವರು, ಇಂದು 164 ಸ್ಟೇಟ್ಮೆಂಟ್ ಮಾಡಿಸ್ತೀವಿ. ನಿನ್ನೆಯತನಕ ಅತ್ಯಾಚಾರ ಅಂತ ನಮಗೆ ಹೇಳಿಲ್ಲ. ವಿಡಿಯೋ ಸ್ಟೇಟ್ ಮೆಂಟ್ ನಲ್ಲಿ ಅವರು ಹೇಳಿಲ್ಲ. ಮತ್ತೆ ಇವತ್ತು 164 ಸ್ಟೇಟ್ ಮೆಂಟ್ ನಲ್ಲಿ ಏನು ಬರುತ್ತೆ. ಅದರ ಮೇಲೆ ಮತ್ತೆ ಸೆಕ್ಷನ್ ಸೇರಿಸ್ತೀವಿ. ಅವರು ಪ್ರತ್ಯೇಕ ದೂರು ಕೊಟ್ಟರೆ ಅದರ ಮೇಲೆ ಎಫ್ ಐ ಆರ್ ಮಾಡಿ ತನಿಖೆ ಮಾಡುತ್ತೇವೆ. ಕಳೆದ ದಿನ ಎಫ್ಐಆರ್ನಲ್ಲಿ 3 ಜನರ ಹೆಸರು ಇದ್ದವು. ಮತ್ತೆ ಹೆಚ್ಚಿನ ತನಿಖೆ ನಡೆಸಿದಾಗ 6 ರಿಂದ 7 ಜನ ಇದಾರೆ ಅಂತ ಮಾಹಿತಿ ಇದೆ. ಅವರನ್ನೂ ಸಹಿತ ಹುಡುಕಾಡುತ್ತಿದ್ದೀವೆ ಎಂದ ಹಾವೇರಿ ಎಸ್ಪಿ ಅಂಶು ಕುಮಾರ್ ಹೇಳಿದ್ದಾರೆ.
ಸಂತ್ರಸ್ತೆಯು ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ತಾನು ಹೋಟೆಲ್ ನಲ್ಲಿ ತಂಗಿದ್ದಾಗ ಐದರಿಂದ ಆರು ಜನರ ಗುಂಪೊಂದು ಒಳಗೆ ನುಗ್ಗಿ ತನ್ನನ್ನು ಪ್ರಶ್ನಿಸಿ ಹಲ್ಲೆ ನಡೆಸಿ ನನ್ನನ್ನು ಬಲವಂತವಾಗಿ ತಮ್ಮ ಬೈಕ್ ಗಳಲ್ಲಿ ನಿರ್ಜನಪ್ರದೇಶಕ್ಕೆ ಕರೆದೊಯ್ದರು. ಅಲ್ಲಿ ನನ್ನ ಮೇಲೆ ಹಲ್ಲೆ ಮಾಡಿ ಬಳಿಕ ಅತ್ಯಾಚಾರವೆಸಗಿದ್ದಾರೆ. ಬಳಿಕ ಕಾರಿನೊಳಗೆ ಎಳೆದೊಯ್ಯುದು ಕಾರಿನ ಚಾಲಕ ಅತ್ಯಾಚಾರ ಮಾಡಿರುವುದಾಗಿ ಹೇಳಿಕೆ ನೀಡಿದ್ದರು.