ಬೆಂಗಳೂರು: ಸುಳ್ಳು ಮಾಹಿತಿ ನೀಡಿ ಸೌಲಭ್ಯ ಪಡೆಯುವುದನ್ನು ತಪ್ಪಿಸಲು ಹೊಸ ನಿಯಮಗಳನ್ನು ಜಾರಿಗೊಳಿಸಲು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ಮುಂದಾಗಿದೆ. ಹೌದು ಕುಟುಂಬದ ವಾರ್ಷಿಕ ಆದಾಯ 32 ಸಾವಿರ ರೂ.ಗಿಂತ ಕಡಿಮೆ ಇದ್ದರಷ್ಟೇ ಇನ್ನು ಮುಂದೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಪಿಂಚಣಿ ಸೌಲಭ್ಯ ಸಿಗಲಿದೆ .
ಮಾಸಿಕ ಪಿಂಚಣಿಗಾಗಿ 60 ವರ್ಷ ಮೇಲ್ಪಟ್ಟವರು ಸಂಧ್ಯಾ ಸುರಕ್ಷಾ ಯೋಜನೆಯಡಿ ವಯಸ್ಸಿನ ದೃಢೀಕರಣ ಪತ್ರದೊಂದಿಗೆ ಹಾಗೂ ವಿಧವಾ ವೇತನಕ್ಕಾಗಿ ಪತಿಯ ಮರಣಪ್ರಮಾಣ ಪತ್ರ, ಪಡಿತರ ಚೀಟಿಯೊಂದಿಗೆ ಈವರೆಗೆ ನಾಡಕಚೇರಿಗಳಲ್ಲಿ ಅರ್ಜಿ ಸಲ್ಲಿಸಬೇಕಿತ್ತು.
ಆದರೆ, ಇವುಗಳ ಜೊತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಕಡ್ಡಾಯಗೊಳಿಸಲಾಗಿದೆ. ಹೊಸ ವ್ಯವಸ್ಥೆಯಲ್ಲಿ 32 ಸಾವಿರ ರೂ.ಗಿಂತ ಹೆಚ್ಚಿನ ಆದಾಯ ಹೊಂದಿರುವವರ ಅರ್ಜಿಗಳು ತಿರಸ್ಕೃತ ಮಾಡಲಾಗುತ್ತದೆ.
ಬಿಪಿಎಲ್ ಕಾರ್ಡ್ನ ವಾರ್ಷಿಕ ಆದಾಯ 1.20 ಲಕ್ಷ ರೂ. ಮಿತಿ ಇದೆ. ಹೊಸ ವ್ಯವಸ್ಥೆಯಲ್ಲಿ ಬಿಪಿಎಲ್ ಕಾರ್ಡ್ ಹಾಗೂ ಆಧಾರ್ ಜೋಡಣೆ ಕಡ್ಡಾಯವಾಗಿರುವುದರಿಂದ 32 ಸಾವಿರ ಆದಾಯವಿರುವುದಾಗಿ ಪ್ರಮಾಣಪತ್ರ ಸಲ್ಲಿಸಿ ಬಿಪಿಎಲ್ ಕಾರ್ಡ್ ಪಡೆದಿರುವವರು ಪಿಂಚಣಿ ಪಡೆಯಲು ಮಾತ್ರ ಅರ್ಹರರಾಗಿರುತ್ತಾರೆ.
ಈಗ ಪಿಂಚಣಿಗೆ ಸಲ್ಲಿಕೆಯಾಗುತ್ತಿರುವ ಬಹುತೇಕ ಅರ್ಜಿಗಳು 30 ಸಾವಿರ ಆದಾಯ ಮಿತಿಗೆ ಹೊಂದಾಣಿಕೆಯಾಗದೆ ಸಲ್ಲಿಕೆ ಸಂದರ್ಭದಲ್ಲೇ ಸ್ವೀಕೃತಿಯಾಗುತ್ತಿಲ್ಲ. ಬಿಪಿಎಲ್ ಪಡಿತರ ಚೀಟಿಗೆ 1.20 ಲಕ್ಷ ರೂ. ಅದಾಯ ಮಿತಿಯಿರುವಾಗ, ಪಿಂಚಣಿಗಾಗಿ ಈ ಮಿತಿಯನ್ನು 32 ಸಾವಿರ ರೂ.ಗಳಿಗೆ ನಿರ್ಬಂಧಿಸಿರುವುದು ಎಷ್ಟು ಸರಿ ಎಂದು ಹಿರಿಯ ನಾಗರಿಕರು ಪ್ರಶ್ನಿಸಿದ್ದಾರೆ. ಪಿಂಚಣಿಗೆ ಹೊಸ ಆದಾಯ ಪ್ರಮಾಣಪತ್ರ ಹಾಗೂ ಪಡಿತರ ಚೀಟಿ ಪಡೆಯಬೇಕಾದ ಅನಿವಾರ್ಯತೆ ಬಂದಿದೆ.
ಸರ್ಕಾರ ಗ್ಯಾರಂಟಿ ಯೋಜನೆಗಳಡಿ ಕೊಡುತ್ತಿರುವ ಹಣದ ಲೆಕ್ಕಾಚಾರದಲ್ಲೇ ವಾರ್ಷಿಕ 33 ಸಾವಿರ ರೂ. ಆಗುತ್ತದೆ. ಗೃಹಲಕ್ಷಿ್ಮ ಯೋಜನೆಯಡಿ ಮಾಸಿಕ 2 ಸಾವಿರ ರೂ.ನಂತೆ ವಾರ್ಷಿಕ 24 ಸಾವಿರ ರೂ. ಆಗುತ್ತದೆ. ಅನ್ನಭಾಗ್ಯ ಅಕ್ಕಿ ಹಣ ತಲಾ ಒಬ್ಬರಿಗೆ 750 ರೂ.ನಂತೆ ಐವರಿಗೆ ಲೆಕ್ಕ ಹಾಕಿದರೂ ವಾರ್ಷಿಕ 9,000 ರೂ. ಆಗುತ್ತೆ. ಇವೆರಡರಿಂದಲೇ ವಾರ್ಷಿಕ 33 ಸಾವಿರ ರೂ. ದೊರೆಯಲಿದೆ. ಇನ್ನು ಯುವನಿಧಿ ಫಲಾನುಭವಿಯಾದರೆ ಕನಿಷ್ಠ 18 ಸಾವಿರ ಹಾಗೂ ಗರಿಷ್ಠ 36 ಸಾವಿರ ರೂ.ವರೆಗೆ (ಎರಡು ವರ್ಷದ ಅವಧಿಗೆ) ದೊರೆಯುತ್ತದೆ.
ಬಿಪಿಎಲ್ ಕಾರ್ಡ್ಗೆ -ಠಿ;1.20 ಲಕ್ಷ ಆದಾಯ ಮಿತಿ ಇದೆ. ಆದರೆ, ಪಿಂಚಣಿಗೆ 32 ಸಾವಿರ ಅದಾಯ ಮಿತಿಗೊಳಿಸಿರುವುದು ಸರ್ಕಾರ ವೃದ್ಧರಿಗೆ ಮಾಡುತ್ತಿರುವ ಅನ್ಯಾಯ. ಸರ್ಕಾರವೇ ಹೀಗೆ ಮಾಡಿದರೆ ಯಾರ ಬಳಿ ಸಮಸ್ಯೆ ಹೇಳಿಕೊಳ್ಳಬೇಕು.