ರಾಂಚಿ: ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ಬುಧವಾರ ಚಂಪೈ ಸೊರೆನ್ ಅವರನ್ನು ಜಾರ್ಖಂಡ್ನ ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಜಾರ್ಖಂಡ್ ಪ್ರತ್ಯೇಕ ರಾಜ್ಯ ರಚನೆಯಲ್ಲಿ ಚಂಪೈ ಸೊರೇನ್ ಪ್ರಮುಖ ಪಾತ್ರವಹಿಸಿದ್ದರು. ಅದೇ ಕಾರಣಕ್ಕೆ ಚಂಪೈ ಸೊರೇನ್ರನ್ನ ಜಾರ್ಖಂಡ್ ಟೈಗರ್ ಅಂತ ಜನ ಅವರನ್ನ ಕರೆಯುತ್ತಾರೆ.
ಜಾರ್ಖಂಡ್ನ ಹಾಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ಇಡಿ ಬಂಧಿಸಬಹುದು ಎಂಬ ಊಹಾಪೋಹಗಳ ನಡುವೆಯೇ ಈ ಬೆಳವಣಿಗೆ ನಡೆದಿದೆ. ಹೇಮಂತ್ ಸೊರೆನ್ ರಾಜೀನಾಮೆ ನೀಡಿದ್ದು, ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಇದನ್ನು ಅಂಗೀಕರಿಸಿದ್ದಾರೆ.
ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಇಡಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರನ್ನು ರಾಂಚಿಯಲ್ಲಿ ವಿಚಾರಣೆ ನಡೆಸುತ್ತಿದೆ. ಭೂ ಅಕ್ರಮ ಕೇಸ್ನಲ್ಲಿ ಹೇಮಂತ್ ಸೊರೇನ್ಗೆ ಇಡಿ ಅಧಿಕಾರಿಗಳು ಸಾಲು ಸಾಲು ನೋಟಿಸ್ ನೀಡಿದ್ದರು. 9 ಬಾರಿ ನೋಟಿಸ್ ನೀಡಿದ್ದರೂ ಕೂಟ ಹೇಮಂತ್ ಸೊರೇನ್ ಇದಕ್ಕೆಲ್ಲ ಉತ್ತರ ನೀಡಿರಲಿಲ್ಲ. ಕೊನೆಗೆ ಜ.31ಕ್ಕೆ ವಿಚಾರಣೆಗೆ ಹಾಜರಾಗಲು ಇ.ಡಿಯಿಂದ 10ನೇ ನೋಟಿಸ್ ನೀಡಲಾಗಿತ್ತು. ಇದರ ಬೆನ್ನಲ್ಲೇ ಹೇಮಂತ್ ಸೊರೇನ್ ಸುಮಾರು 30 ಗಂಟೆಗಳ ಕಾಲ ನಾಪತ್ತೆ ಆಗಿದ್ದರು. ಇನ್ನು ಸೊರೇನ್ ನಿವಾಸದ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು ಕಾರು, ದಾಖಲೆ ವಶಕ್ಕೆ ಪಡೆದಿದ್ದರು. ಇದಾದ ಬಳಿಕ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ ಸೊರೇನ್, ಮಂಗಳವಾರ ರಾಂಚಿಯಲ್ಲಿ ಪ್ರತ್ಯಕ್ಷರಾಗಿದ್ರು