ಬೆಂಗಳೂರು: ಹೈಕೋರ್ಟ್‌ನ ನ್ಯಾಯಧೀಶರ ಮುಂದೆಯೇ ಬ್ಲೇಡ್‌ನಿಂದ ಕತ್ತುಕೊಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದ ವ್ಯಕ್ತಿಯನ್ನು ತಕ್ಷಣವೇ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಆತ ಯಾರು ಹಾಗೂ ಆತ್ಮಹತ್ಯೆಗೆ ಪ್ರತ್ನಿಸಿದ್ದೇಕೆ ಎನ್ನುವುದಕ್ಕೆ ಮಾಹಿತಿ ಸಿಕ್ಕಿದೆ.
ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ಹೆಸರು ಚಿನ್ನಂ ಶ್ರೀನಿವಾಸ್. ಮೂಲತಃ ಮೈಸೂರಿನ ವಿಜಯನಗರದ ನಿವಾಸಿ. ಸಿಜೆಗೆ ದೂರು ನೀಡಲು ಹೆಂಡತಿ ಜೊತೆ ಹೈಕೋರ್ಟ್‌ಗೆ ಬಂದಿದ್ದರು.ಈ ಹಿಂದೆ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಗೆ ಶ್ರೀನಿವಾಸ್ ಚಿನ್ನಂ ದೂರು ನೀಡಿದ್ದರು. ಪ್ರಕರಣ ಏಕಸದಸ್ಯ ಪೀಠದಲ್ಲಿ ರದ್ದಾಗಿತ್ತು. ಈ ಸಂಬಂಧ ಸಿಜೆಗೆ ದೂರು ನೀಡಲು ಬಂದಿದ್ದು, ಕೋರ್ಟ್ ಹಾಲ್ನಲ್ಲಿ ಸಿಬ್ಬಂದಿಗೆ ದೂರಿನ ಪ್ರತಿ ನೀಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಅಪಾರ್ಟ್‌ಮೆಂಟ್ ಕಟ್ಟಿ ಲಾಭ ಪಡೆಯುದಾಗಿ ಶ್ರೀನಿವಾಸ್ ಮತ್ತು ಇತರರೊಂದಿಗೆ ಒಪ್ಪಂದವಾಗಿತ್ತು.ಪಾಲಿಸದೇ 93 ಲಕ್ಷ ರೂ. ಪಡೆದು ವಂಚಿಸುವುದಲ್ಲದೇ ಇವರ ವಿರುದ್ಧ ದೂರು ನೀಡಿದಕ್ಕೆ ಜೀವ ಬೆದರಿಕೆ ಹಾಕಿದ್ದರು ಹಾಗೂ ಈ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.ಎಫ್ಐಆರ್ ಪ್ರಶ್ನಿಸಿ ಶ್ರೀಧರ್ ರಾವ್ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸಿವಿಲ್ ವ್ಯಾಜ್ಯವಾಗಿರುವುದರಿಂದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ, ಸಿವಿಲ್ ಕೋರ್ಟ್‌ನಲ್ಲಿ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳಲು ಸೂಚಿಸಿತ್ತು. ಹೀಗಾಗಿ ಸಿಜೆಗೆ ದೂರು ನೀಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.