ಹೊರಟಿದ್ದು ಮದ್ವೆಗೆ, ಸೇರಿದ್ದು ಮಸಣಕ್ಕೆ..!: ಮಾವ ಸೊಸೆ ಬಲಿ ಪಡೆದ ಲಾರಿ

ಲಬುರಗಿ: ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಮದ್ವೆಗೆ ಹೊರಟಿದ್ದ ಮಾವ ಸೊಸೆ ಸ್ಥಳದಲ್ಲೆ ಸಾವನ್ನಪ್ಪಿದ ದಾರುಣ ಘಟನೆ ಕಲಬುರಗಿಯಲ್ಲಿ ನಡೆದಿದೆ. ನಗರದ ಹೊರವಲಯದ ಅವರಾದ್ ಬಳಿ ಘಟನೆ ನಡೆದಿದ್ದು 60 ವರ್ಷದ ಮಾವ ಗುರುನಾಥ್ 32 ವರ್ಷದ ಸೊಸೆ ಸಂಗೀತಾ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಲಕ್ಷ್ಮಣ ಎಂಬುವರಿಗೆ ಗಂಭಿರ ಗಾಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೇಲೂರಿನಿಂದ ಬಸವಕಲ್ಯಾಣಕ್ಕೆ ಸಂಬಂಧಿಕರ ಮದುವೆಗೆ ಬೈಕ್ ಮೇಲೆ ತೆರಳುವಾಗ ದುರಂತ ಸಂಭವಿಸಿದೆ. ಒಂದೇ ಬೈಕ್ ಮೇಲೆ ಮೂವರು ತೆರಳುತ್ತಿದ್ದರು ಎನ್ನಲಾಗಿದೆ. ಸಂಚಾರಿ ಠಾಣೆ ಪೋಲೀಸ್ರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ..

Font Awesome Icons

Leave a Reply

Your email address will not be published. Required fields are marked *