ಹೊಸದಿಲ್ಲಿ: ಸುಕೇಶ್ ಚಂದ್ರ ಶೇಖರ್ ವಿರುದ್ಧದ 200 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ಜಾಮೀನು ಷರತ್ತುಗಳನ್ನು ದೆಹಲಿ ನ್ಯಾಯಾಲಯ ಮಾರ್ಪಡಿಸಿದೆ. ಆಕೆ ಯಾವುದೇ ಪೂರ್ವಾನುಮತಿ ಇಲ್ಲದೆ ದೇಶವನ್ನು ತೊರೆಯಲು ನ್ಯಾಯಾಲಯವು ಅನುಮತಿ ನೀಡಿದೆ.
ವಿಶೇಷ ನ್ಯಾಯಾಧೀಶ ಶೈಲೇಂದ್ರ ಮಲ್ಲಿಕ್ ಅವರ ನ್ಯಾಯಪೀಠವು ಕಳೆದ ವರ್ಷ ನವೆಂಬರ್ನಲ್ಲಿ ಜಾಕ್ವೆಲಿನ್ಗೆ ಜಾಮೀನು ನೀಡಿತ್ತು. ಆದಾಗ್ಯೂ, ಅದರಲ್ಲಿನ ಷರತ್ತುಗಳಿಂದ ಆಕೆ ವಿದೇಶಕ್ಕೆ ಪೂರ್ವಾನುಮತಿ ಇಲ್ಲದೇ ತೆರಳುವುದು ಅಸಾಧ್ಯವಾಗಿತ್ತು. ಇದರಿಂದ ವೃತ್ತಿಜೀವನದ ಸಾಕಷ್ಟು ಅವಕಾಶಗಳಿಂದ ಜಾಕ್ವೆಲಿನ್ ವಂಚಿತರಾಗಿದ್ದನ್ನೂ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಪೀಠ ನಿಯಮ ಸಡಿಲಗೊಳಿಸಿದೆ. ಆದರೆ, ವಿದೇಶಕ್ಕೆ ಪ್ರಯಾಣಿಸುವ 3-4 ದಿನದ ಮುಂಚೆಯೇ ಜಾರಿ ನಿರ್ದೇಶನಾಲಯ (ಇಡಿ)ಕ್ಕೆ ಮಾಹಿತಿ ನೀಡಬೇಕೆಂದು ಜಾಕ್ವೆಲಿನ್ ಅವರಿಗೆ ನಿರ್ದೇಶಿಸಿದೆ.