ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಓರ್ವ ಯುವಕ ಸಾವು

ಶಿಕಾರಿಪುರ: ಶಿಕಾರಿಪುರದಲ್ಲಿ ನಡೆದ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಓರ್ವ ಯುವಕ ಸಾವನಪ್ಪಿದ್ದಾನೆ.

ಈತ ಈ ಸ್ಪರ್ಧೆ ನೋಡಲು ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಶಿಕಾರಿಪುರ ತಾಲೂಕಿನ ತರಲಘಟ್ಟ ಗ್ರಾಮದಲ್ಲಿ ರಾಜ್ಯ ಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯು ಜ. 21 ರಂದು ನಡೆಯಿತು.

ಈ ವೇಳೆ ಶಿಕಾರಿಪುರ ತಾಲೂಕಿನ ಈಸೂರು ಗ್ರಾಮದ ಪರಶುರಾಮ್ ಎಂಬ 27 ವರ್ಷದ ಯುವಕನು ಹೋರಿ ಸ್ಪರ್ಧೆಯನ್ನು ಹತ್ತಿರದಿಂದ ನೋಡುತ್ತಿದ್ದನು. ಈ ವೇಳೆ ಓಡಿಬಂದ ಹೋರಿಯು ಕೊಂಬಿನಿಂದ ಪರಶುರಾಮನ ಹೊಟ್ಟೆಗೆ ತಿವಿದಿತ್ತು. ಈ ವೇಳೆ ತೀವ್ರವಾಗಿ ಗಾಯಗೊಂಡ ಪರಶುರಾಮ್ ನನ್ನು ಸ್ನೇಹಿತರೇ ಬೈಕ್ ಮೇಲೆ ಶಿಕಾರಿಪುರ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪರಶುರಾಮ್ ಮೃತಪಟ್ಟಿದ್ದಾನೆ.

Font Awesome Icons

Leave a Reply

Your email address will not be published. Required fields are marked *