ವಾಷಿಂಗ್ಟನ್: ಭಾರತ ಮೂಲದ ಧ್ರುವಿ ಪಟೇಲ್ ಅವರು ಈ ವರ್ಷದ ಮಿಸ್ ಇಂಡಿಯಾ ವರ್ಲ್ಡ್ ವೈಡ್ 2024 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ನ್ಯೂಜೆರ್ಸಿಯ ಎಡಿಸನ್‌ನಲ್ಲಿ ನಡೆದ ಸಮಾರಂಭದಲ್ಲಿ ಧ್ರುವಿ ಪಟೇಲ್ ಅವರ ಹೆಸರು ಘೋಷಣೆ ಮಾಡಲಾಯಿತು.
ಧ್ರುವಿ ಪಟೇಲ್ ಮೂಲತ ಗುಜರಾತ್ ಮೂಲದವರಾಗಿದ್ದು ಅಮೆರಿಕದಲ್ಲಿ ಕಂಪ್ಯೂಟರ್ ಇಂಫಾರ್ಮೇಷನ್ ಸಿಸ್ಟಮ್ ಪದವಿ ಓದುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಧ್ರುವಿ ‘ಮಿಸ್ ಇಂಡಿಯಾ ವರ್ಲ್ಡ್ ವೈಡ್ ಪ್ರಶಸ್ತಿ ಒಲಿದಿರುವುದು ಸಂತಸ ತಂದಿದೆ. ಇದು ಕೇವಲ ಕಿರೀಟವಲ್ಲ ಇದು ಜಾಗತಿಕ ಮಟ್ಟದಲ್ಲಿ ಸಿಕ್ಕಿರುವ ಗೌರವ ಎಂದು ಹೇಳಿಕೊಂಡಿದ್ದಾರೆ. ಬಾಲಿವುಡ್ ನಟಿಯಾಗುವ ಕನಸು ಕಂಡಿದ್ದೆ ಆದರೆ ಈಗ ಮಿಸ್ ಇಂಡಿಯಾ ವರ್ಲ್ಡ್ ವೈಡ್ ಪ್ರಶಸ್ತಿ ಲಭಿಸಿರುವುದರಿಂದ UNICEF ರಾಯಭಾರಿಯಾಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಸುರಿನಾಮ್‌ನ ಲೀಸಾ ಅಬ್ದುಲ್‌ಹಕ್ ಮೊದಲ ರನ್ನರ್ ಅಪ್ ಆಗಿದ್ದರೆ, ನೆದರ್ಲೆಂಡ್ಸ್‌ನ ಮಾಳವಿಕಾ ಶರ್ಮಾ ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದಾರೆ. ಅದರಂತೆ ಯುವ ವಿಭಾಗದಲ್ಲಿ ಗ್ವಾಡೆಲೋಪ್‌ನ ಸಿಯೆರಾ ಸುರೆಟ್ ಮಿಸ್ ಟೀನ್ ಇಂಡಿಯಾ ವರ್ಲ್ಡ್‌ವೈಡ್ ಆಗಿ ಆಯ್ಕೆಯಾದರೆ. ನೆದರ್ಲೆಂಡ್ಸ್‌ನ ಶ್ರೇಯಾ ಸಿಂಗ್ ಮತ್ತು ಸುರಿನಾಮ್‌ನ ಶ್ರದ್ಧಾ ಟೆಡ್ಜೊ ಮೊದಲ ಮತ್ತು ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದಾರೆ.