ಹಾಸನ,ಸೆಪ್ಟಂಬರ್,6,2024 (www.justkannada.in): 2027ರ ವೇಳೆಗೆ ಎತ್ತಿನಹೊಳೆ ಯೋಜನೆ ಸಂಪೂರ್ಣ ಜಾರಿ ಮಾಡುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಭರವಸೆ ನೀಡಿದರು.
ಇಂದು ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ದೊಡ್ಡನಾಗರದ ಬಳಿ ವಿತರಣಾ ತೊಟ್ಟಿ 3ರಲ್ಲಿ ಎತ್ತಿನ ಹೊಳೆ ಯೋಜನೆಯ ಮೊದಲ ಹಂತವನ್ನ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಮಹತ್ವಾಕಾಂಕ್ಷೆ ಯೋಜನೆ ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ. ಇದು 527 ಕೆರೆಗಳನ್ನ ತುಂಬಿಸುವ ಯೋಜನೆಯಾಗಿದೆ. ಜಲಸಂಪನ್ಮೂಲ ಇಲಾಖೆಗೆ ಮಹತ್ವದ ದಿನ. ದೊಡ್ಡ ಕೆಲಸಕ್ಕೆ ಕೈ ಹಾಕಿದ್ದೇವೆ. ಯೋಜನೆ ಜಾರಿಗ ಹಲವು ನಾಯಕರ ಪರಿಶ್ರಮವಿದೆ ಎಂದರು
ಬಯಲು ಸೀಮೆಗೆ ಇಂದು ಗಂಗೆ ಹರಿಯತ್ತಿದ್ದಾಳೆ. ಇದು ನಮ್ಮ ತಪಸ್ಸು ಸಂಕಲ್ಪ 7 ಜಿಲ್ಲೆಗಳ 6657 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. 10 ವರ್ಷದ ಬಳಿಕ ಭಗೀರಥ ಪ್ರಯತ್ನ ಮಾಡಿದ್ದೇವೆ. ಯೋಜನೆ ಜಾರಿಯಾಗದಂತೆ ಕೆಲವರು ಅಡ್ಡಿ ಮಾಡಿದ್ದರು. ಹಿಂದೆ ಇದು ಎತ್ತಿಗಾಗಿ ಇರುವ ಹೊಳೆ ಎಂದರು. ಈ ನೀರು ಬಯಲು ಸೀಮೆಗೆ ಹರಿಯಲು ಸಾಧ್ಯವೇ ಎಂದರು. ಆದ್ರೆ ಇದು ಎತ್ತಿಗಾಗಿ ಮಾಡಿದ ಹೊಳೆ ಅಲ್ಲ. ಕುಡಿಯುವ ನೀರಿಗಾಗಿ ಮಾಡಿರುವ ಯೋಜನೆ ಎಂದು ಟಾಂಗ್ ಕೊಟ್ಟರು.
Key words: Ettinahole project, completely, implemented, 2027, DCM, DK Shivakumar