ನವದೆಹಲಿ: ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಮತ್ತು ನಿಷೇಧಿತ ಜಮಾತ್-ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್ ಏಳು ಭಯೋತ್ಪಾದಕ ಹಣಕಾಸು ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಪರಿಣಾಮವಾಗಿ 78 ವರ್ಷಗಳ ಜೈಲು ಶಿಕ್ಷೆಯನ್ನ ಅನುಭವಿಸುತ್ತಿರುವ ಪಾಕಿಸ್ತಾನದ ವಶದಲ್ಲಿದ್ದಾನೆ ಎಂದು ವಿಶ್ವಸಂಸ್ಥೆ ನವೀಕರಿಸಿದ ಮಾಹಿತಿಯಲ್ಲಿ ತಿಳಿಸಿದೆ.
ಇನ್ನು ಡಿಸೆಂಬರ್ 2008ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ಅಲ್-ಖೈದಾ ನಿರ್ಬಂಧಗಳ ಸಮಿತಿಯಿಂದ ಜಾಗತಿಕ ಭಯೋತ್ಪಾದಕ ಎಂದು ಹೆಸರಿಸಲ್ಪಟ್ಟ ಸಯೀದ್, “ಪಾಕಿಸ್ತಾನ ಸರ್ಕಾರದ ವಶದಲ್ಲಿದ್ದಾನೆ. ಏಳು ಭಯೋತ್ಪಾದಕ ಹಣಕಾಸು ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಪರಿಣಾಮವಾಗಿ 2020ರ ಫೆಬ್ರವರಿ 12 ರಿಂದ 78 ವರ್ಷಗಳ ಜೈಲು ಶಿಕ್ಷೆಯನ್ನ ಅನುಭವಿಸುತ್ತಿದ್ದಾನೆ” ಎಂದು ನಿರ್ಬಂಧಗಳ ಸಮಿತಿಯು ತಿದ್ದುಪಡಿ ಮಾಡಿದ ನಮೂದಿನಲ್ಲಿ ತಿಳಿಸಿದೆ.