29 ಓವರಿನಲ್ಲಿ ಒಂದು ಫೋರ್ ಹೊಡೆಯಲಾಗದಂಥ ಪಿಚ್ಚು ಯಾಕೆ ಮಾಡಿಸಬೇಕಿತ್ತು: ನಟ ಕಿಶೋರ್‌

ಬೆಂಗಳೂರು: ವಿಶ್ವಕಪ್‌  ಕ್ರಿಕೆಟ್‌ನಲ್ಲಿ ಭಾರತ ಸೋಲು ಕಂಡಿದೆ. ಈ ಬಗ್ಗೆ ವಿಮರ್ಷೆಗಳು ಜೋರಾಗಿದೆ. ಹಲವರು ನಾನಾ ರೀತಿಯಲ್ಲಿ ಕಮೆಂಟ್‌ ಮಾಡುತ್ತಿದ್ದಾರೆ. ಈಗ ನಟ ಕಿಶೋರ್‌ ಸರದಿ.

ನಟ ಕಿಶೋರ್ ಪ್ರಮುಖವಾಗಿ ಕ್ರಿಕೆಟನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಅನ್ನೋ ಗಂಭೀರ ಆರೋಪ ಮಾಡಿದ್ದಾರೆ. ರಾಜಕೀಯ ಲಾಭ, ಕಳ್ಳರ ದುರಾಸೆ ಮತ್ತು ಎಲ್ಲವನ್ನೂ ತಿರುಚುವ ಹೊಲಸು ಅಭ್ಯಾಸ ಬಲದಿಂದ ಅದ್ಭುತ ತಂಡ ಸೋಲು ಕಂಡಿದೆ ಎಂದು ಕಿಶೋರ್ ಹೇಳಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಿಶೋರ್, ಬಿಸಿಸಿಐ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮ. ಇಂದಿನ ಭಾರತದಲ್ಲಿ ಧರ್ಮ ರಾಜಕೀಯದ ದಾಳವಾಗಿದೆ. ಕ್ಷಮೆಯಿರಲಿ ಟೀಮ್ ಇಂಡಿಯಾ. ನೀವು ಸೋತಿಲ್ಲ, ನಿಮ್ಮನ್ನು ಗೌರವಿಸುವಲ್ಲಿ ನಾವು ಸೋತಿದ್ದೇವೆ. ಬಿಸಿಸಿಐ ಐಪಿಎಲ್ ಎಲ್ಲವನ್ನೂ ಕಪಿಮುಷ್ಟಿಯಲ್ಲಿ ಹಿಡಿದ ಕೂತ ರಾಜಕಾರಿಣಿಗಳನ್ನು ಆಯ್ಕೆ ಮಾಡಿದವರು ನಾವೇ ಅಲ್ಲವೇ? ನಮಗೆಲ್ಲರಿಗೂ ಗೊತ್ತು ಕೊನೆಗೆ ಇದು ಬರೀ ಟಾಸಿನಾಟವಾಗಿಹೋಯ್ತು ಎಂದುರು.

ಟಾಸ್ ಸೋಲು ಅದೂ ಕೆಟ್ಟ ವಿಕೆಟ್ಟಿನ ಮೇಲೆ, ಪಂದ್ಯಕ್ಕೇ ಎರವಾಯ್ತು. ಬಾಲ್ ಹಳೆಯದಾಗುತ್ತಿದ್ದಂತೆ ತಡೆತಡೆದು ಬರುತ್ತಿದ್ದುದು, ಬೌನ್ಸ್ ಏರುಪೇರಾದದ್ದು ಕ್ರಿಕೆಟ್ ಗೊತ್ತಿಲ್ಲದವರಿಗೂ ಎದ್ದು ಕಾಣುತ್ತಿತ್ತು. ಅದೇ ಪಿಚ್‌ನಲ್ಲಿ, ಆಸ್ಟ್ರೇಲಿಯಾದ 3 ವಿಕೆಟ್ಟಿನ ನಂತರ ಸಂಜೆ ಇಬ್ಬನಿ ಬಂದೊಡನೆ ಬಾಲ್ ಬ್ಯಾಟಿಗೆ ಸಲೀಸಾಗಿ ಬರಲಾರಂಭಿಸಿದ್ದೂ ಸಹ. ಅಷ್ಟು ಒಳ್ಳೆಯ ಫಾರ್ಮಿನಲ್ಲಿರುವ ಇದುವರೆಗೂ ಅಜೇಯವಾಗಿದ್ದ , ಎಂಥಾ ಪಿಚ್ಚಿನ ಮೇಲೆ ಆಡಿದ್ದರೂ ಗೆಲ್ಲಬಹುದಿದ್ದ ಟೀಮಿಗೆ ಹೋಮ್ ಅಡ್ವಾಂಟೇಜಿನ ನೆಪದಲ್ಲಿ ಇಂತಹ ಪಿಚ್ ಯಾಕೆ ಬೇಕಿತ್ತು? ಇಲ್ಲಿನ ರಾಜಕಾರಿಣಿಗಳ ಚಿಲ್ಲರೆ ಕೆಲಸಕ್ಕೆ ಶ್ರೀಲಂಕಾ ಕ್ರಿಕೆಟ್ ಬೋರ್ಡನ್ನು ಬಲಿ ಕೊಡಿಸುವಷ್ಟು ಐಸಿಸಿಯ ಮೇಲೆ ಪ್ರಭಾವವಿರುವ ಕೋಟ್ಯಾಧಿಪತಿ ಬಿಸಿಸಿಐ, 29 ಓವರಿನಲ್ಲಿ ಒಂದು ಫೋರ್ ಹೊಡೆಯಲಾಗದಂಥ ಪಿಚ್ಚು ಯಾಕೆ ಮಾಡಿಸಬೇಕಿತ್ತು.

ಕೆಲಸ ಮಾಡಿ ಓಟು ಕೇಳಲು ತಾಕತ್ತಿಲ್ಲದ ಅಯೋಗ್ಯ ಕ್ರೆಡಿಟ್ಟು ಕಳ್ಳರಿಗೆ ಈ ಗೆಲುವು ಹೆಚ್ಚು ಅನಿವಾರ್ಯವಾಗಿತ್ತೇನೊ.. ಒಟ್ಟಿನಲ್ಲಿ ಈ ರಾಜಕೀಯ ಕ್ರೆಡಿಟ್ಟು ಕಳ್ಳರ ದುರಾಸೆ ಮತ್ತು ಎಲ್ಲವನ್ನೂ ತಿರುಚುವ ಹೊಲಸು ಅಭ್ಯಾಸ ಬಲದಿಂದ ಎಂತಹ ಅದ್ಭುತ ತಂಡ … ಸೋಲು ಅನುಭವಿಸಬೇಕಾಯಿತು ..ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲರ ಹೆಸರು ತೆಗೆದು ಮೈದಾನಕ್ಕೆ ಬದುಕಿದ್ದಾಗಲೇ ತನ್ನ ಹೆಸರಿಟ್ಟುಕೊಂಡ ಆತ್ಮರತಿಲೋಲನ ಉಪಸ್ಥಿತಿಯಲ್ಲಿ ಎಂದು ಕಿಶೋರ್ ಬರಹದ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Font Awesome Icons

Leave a Reply

Your email address will not be published. Required fields are marked *